ಏಷ್ಯಾಕಪ್ನ 5ನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೇರಿದೆ. ಪಲ್ಲೆಕಲೆ ಮೈದಾನದಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು 10 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಗ್ರೂಪ್-A ನಿಂದ ಸೂಪರ್ ಫೋರ್ ಹಂತಕ್ಕೇರಿದ 2ನೇ ತಂಡ ಎನಿಸಿಕೊಂಡಿದೆ.
ಇದಕ್ಕೂ ಮುನ್ನ ಪಾಕ್ ತಂಡವು ಸೂಪರ್ ಫೋರ್ ಹಂತಕ್ಕೇರಿತ್ತು. ಇದೀಗ ಇದೇ ಗ್ರೂಪ್ನಿಂದ ಭಾರತ ತಂಡ ಕೂಡ ಮುಂದಿನ ಸುತ್ತಿಗೆ ಪ್ರವೇಶಿಸಿದೆ. ಇದರೊಂದಿಗೆ ಮತ್ತೊಮ್ಮೆ ಉಭಯ ತಂಡಗಳ ಮುಂದಿನ ಮುಖಾಮುಖಿಗೆ ಡೇಟ್ ಫಿಕ್ಸ್ ಆದಂತಾಗಿದೆ.
ಅಂದರೆ ಸೂಪರ್-4 ಹಂತದಲ್ಲಿ ಒಟ್ಟು 4 ತಂಡಗಳು ಪರಸ್ಪರ ಸೆಣಸಲಿದೆ. ಇಲ್ಲಿ ಭಾರತ ಹಾಗೂ ಪಾಕ್ ತಂಡಗಳು ಸೆಪ್ಟೆಂಬರ್ 10 ರಂದು ಮುಖಾಮುಖಿಯಾಗುವುದು ಖಚಿತವಾಗಿದೆ.