News Karnataka Kannada
Friday, May 10 2024
ಮಂಗಳೂರು

ಕೊಡಿಯಲ್ ಯುನೈಟೆಡ್ ಸ್ಪೋರ್ಟ್ಸ ಕ್ಲಬ್ ವತಿಯಿಂದ “ಯುನೈಟೆಡ್ ಕ್ರಿಕೆಟ್ ಲೀಗ್”

GSB, Mangaluru is a matter of joy for sports enthusiasts
Photo Credit : News Kannada

ಮಂಗಳೂರು: ಕೊಡಿಯಲ್ ಯುನೈಟೆಡ್ ಸ್ಪೋರ್ಟ್ಸ ಕ್ಲಬ್ ವತಿಯಿಂದ ನಾಲ್ಕನೇ ಋತುವಿನ ಅಂಡರ್ ಆರ್ಮ್  ಕ್ರಿಕೆಟ್ “ಯುನೈಟೆಡ್ ಕ್ರಿಕೆಟ್ ಲೀಗ್” ಶೀರ್ಷಿಕೆಯಡಿಯಲ್ಲಿ ನಡೆಯಲಿದೆ.

ಕೊಡಿಯಲ್ ಯುನೈಟೆಡ್ ಸ್ಪೋರ್ಟ್ಸ ಕ್ಲಬ್ ಉತ್ಸಾಹಭರಿತ ಕ್ರಿಕೆಟ್ ಅಭಿಮಾನಿಗಳ ಕುಟುಂಬವಾಗಿದ್ದು, ಯವಕರನ್ನು ಉತ್ತೇಜಿಸಲು, ಕ್ರಿಕೆಟ್ ನ ಅದ್ಭುತ ಮತ್ತು ಜನಪ್ರಿಯ ಕ್ರೀಡೆಯನ್ನು ಅನ್ವೇಷಿಸಲು ಒಟ್ಟುಗೂಡಿದ ಒಂದು ಸಂಸ್ಥೆ. ಕರ್ನಾಟಕದ ದಕ್ಷಿಣ ಕರಾವಳಿ ಬೆಲ್ಟ್ ವಿಶಿಷ್ಟವಾದ ಅಂಡರ್ ಆರ್ಮ್ ಕ್ರಿಕೆಟ್ ನ ಸಾಂಪ್ರದಾಯಿಕ ಆಟವನ್ನು ಉತ್ತೇಜಿಸಲು ಪ್ರತಿ ವರ್ಷ ಕ್ರಿಕೆಟ್ ಆಯೋಜಿಸುತ್ತಾ ಇರುವ ಇವರು ಇಂದು ಮತ್ತು ನಾಳೆ (ಮಾರ್ಚ್ 25, 26 ) ರಂದು ಮಂಗಳೂರು ಉರ್ವಾ ಮೈದಾನದಲ್ಲಿ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದಾರೆ.

ಟೀಮ್ ಕೊಡಿಯಲ್ ಯುನೈಟೆಡ್ ನ ಸಮಾನ ಮನಸ್ಕ ಕ್ರೀಡಾಪ್ರೇಮಿಗಳು ಯುನೈಟೆಡ್ ಕ್ರಿಕೆಟ್ ಲೀಗ್ 2023 ರಚಿಸಿದ್ದಾರೆ. ಈ ಕ್ರಿಕೆಟ್ ಪಂದ್ಯಾವಳಿ ಸುತ್ತಲಿನ ಪ್ರದೇಶದಲ್ಲಿ ಕುತೂಹಲ ಮೂಡಿಸಿದೆ. ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ಜಿ.ಎಸ್.ಬಿ ಯುವಕರಲ್ಲಿ ಒಗ್ಗಟ್ಟು ತರಲು ಯುಸಿಎಲ್ 2023 ರಚಿಸಲಾಗಿದೆ, ಜಿ.ಎಸ್.ಬಿ ಗಳಲ್ಲೂ ಪ್ರತಿಭಾವಂತ ಕ್ರಿಕೆಟ್ ಆಟಗಾರರು ಇದ್ದಾರೆ. ಈ ಪ್ರದೇಶದ ಜಿ.ಎಸ್.ಬಿ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಐಪಿಎಲ್ ಮಾದರಿಯಲ್ಲಿ ‘ ಯುನೈಟೆಡ್ ಕ್ರೀಕೆಟ್ ಲೀಗ್-2023’ ಕ್ಕೆ ಆಟಗಾರರನ್ನು ಖರೀದಿ ಮಾಡಲಾಗಿದೆ. ಈ ರೀತಿಯ ಬಿಡ್ಡಿಂಗ್‌ನಿಂದ ಉತ್ತಮವಾಗಿ ಆಟವಾಡಲು ಪ್ರೋತ್ಸಾಹ ಸಿಗುತ್ತದೆ. ಇದರಿಂದ ಯುವಕರಲ್ಲಿ ಆಟದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಲಿದೆ.ಪಂದ್ಯಾವಳಿಯ ಹರಾಜು ಪ್ರಕ್ರಿಯೆ ಕಳೆದ ಭಾನುವಾರ ಗೋಪಾಲಕೃಷ್ಣ ಭಟ್ ಮಂಗಳೂರು ನಡೆಸಿಕೊಟ್ಟರು.

ಮಂಗಳೂರಿನ ಅತ್ಯುತ್ತಮ ಮೈದಾನಗಳಲ್ಲಿ ಒಂದಾದ ಉರ್ವಾ ಕ್ರಿಕೆಟ್ ಮೈದಾನದಲ್ಲಿ ಈ ಟೂರ್ನಮೆಂಟ್ ಆಯೋಜಿಸಲಾಗಿದೆ. ಕರ್ನಾಟಕ ಮತ್ತು ಕೇರಳದಾದ್ಯಂತ 10 ಫ್ರಾಂಚೈಸಿ ತಂಡಗಳು ಮತ್ತು ಒಟ್ಟು 150 ಕ್ಕಿಂತ ಅಧಿಕ ಆಟಗಾರರು ಭಾಗವಹಿಸಲಿದ್ದಾರೆ.

ಪಂದ್ಯಾವಳಿಯ ವಿಜೇತ ತಂಡಕ್ಕೆ 50,000 ನಗದು ಮತ್ತು ಟ್ರೋಫಿ, ರನ್ನರ್ ಆಪ್ ತಂಡ 30,000 ಮತ್ತು ಟ್ರೋಫಿ, ಎರಡನೇ ರನ್ನರ್ ಆಪ್ ತಂಡವು ಟ್ರೋಪಿ ಪಡೆಯಲಿದೆ. ಜೋತೆಗೆ ಮ್ಯಾನ್ ಆಫ್ ದಿ ಸೀರೀಸ್, ಮ್ಯಾನ್ ಆಫ್ ದಿ ಮ್ಯಾಚ್, ಅತ್ಯುತ್ತಮ ಬ್ಯಾಟ್ಸ್ ಮನ್, ಅತ್ಯುತ್ತಮ ಬೌಲರ್, ಅತ್ಯುತ್ತಮ ಕ್ಯಾಚರ್ ಬಹುಮಾನಗಳನ್ನು ನೀಡಲಾಗುವುದು.

2017ರಲ್ಲಿ ರೂಪುಗೊಂಡ ಕೊಡಿಯಲ್ ಯುನೈಟೆಡ್ ದಕ್ಷಿಣ ಕನ್ನಡದ ಒಳಗೆ ಮತ್ತು ಹೊರಗೆ ವಿವಿಧ ಪಂದ್ಯಾವಳಿಗಳಲ್ಲಿ ಕ್ರಿಕೆಟ್, ಕಬ್ಬಡಿ, ವಾಲಿಬಾಲ್ ಮತ್ತು ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿದೆ. 2018ರಲ್ಲಿ ಪ್ರಾರಂಭವಾದ ಯುನೈಟೆಡ್ ಕ್ರಿಕೆಟ್ ಲೀಗ್ ಅಂಡರ್ ಆರ್ಮ್ ಕ್ರಿಕೆಟ್ ನ್ನು ಎತ್ತರಕ್ಕೆ ಕೊಂಡೊಯ್ದಿದೆ. ವಿವಿಧ ತಂಡಗಳು ಮತ್ತು ತಂಡದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರೊಂದಿಗೆ ಕಳೆದ ಮೂರೂ ಆವೃತ್ತಿಗಳು ಅದ್ಧೂರಿಯಾಗಿ ಯಶಸ್ವಿಯಾಗಿದೆ. ಕಳೆದ 3 ಸೀಸನ್ ಗಳಲ್ಲಿ ನಡೆದ ಪ್ರತಿಯೊಂದು ಪಂದ್ಯವನ್ನು ಉತ್ತಮವಾಗಿ ಯೋಜಿಸಲಾಗಿದೆ ಮತ್ತು ಆಯೋಜಿಸಲಾಗಿದೆ. ಅಗಾಧ ಪ್ರತಿಕ್ರಿಯೆಯಿಂದಾಗಿ, ಯುನೈಟೆಡ್ ಕ್ರಿಕೆಟ್ ಲೀಗ್ ಈ ವರ್ಷ ತನ್ನ ನಾಲ್ಕನೇ ಋತುವನ್ನು ಪ್ರಾರಂಭಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು