Bengaluru 27°C
Ad

ಫ್ಲೆಮಿಂಗ್‌ ಟೀಂ ಇಂಡಿಯಾ ಕೋಚ್‌ :ಎಂಎಸ್ ಧೋನಿ ಅವರ ಸಹಾಯ ಕೋರಿದ ಬಿಸಿಸಿಐ

ಟೀಂ ಇಂಡಿಯಾದ ಕೋಚ್‌ ಹುದ್ದೆ ನ್ಯೂಜಿಲೆಂಡ್‌ ಮಾಜಿ ನಾಯಕ, ನಿವೃತ್ತ ಆಟಗಾರ ಸ್ಟೀಫನ್ ಫ್ಲೆಮಿಂಗ್ ಅವರನ್ನು ಮನವೊಲಿಸಲು ಬಿಸಿಸಿಐ ಎಂಎಸ್ ಧೋನಿ ಅವರ ಸಹಾಯವನ್ನು ಕೋರಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. 

ಮುಂಬೈ: ಟೀಂ ಇಂಡಿಯಾದ ಕೋಚ್‌ ಹುದ್ದೆ ನ್ಯೂಜಿಲೆಂಡ್‌ ಮಾಜಿ ನಾಯಕ, ನಿವೃತ್ತ ಆಟಗಾರ ಸ್ಟೀಫನ್ ಫ್ಲೆಮಿಂಗ್ ಅವರನ್ನು ಮನವೊಲಿಸಲು ಬಿಸಿಸಿಐ ಎಂಎಸ್ ಧೋನಿ ಅವರ ಸಹಾಯವನ್ನು ಕೋರಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad
300x250 2

2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಸಂಬಂಧ ಹೊಂದಿರುವ ಫ್ಲೆಮಿಂಗ್ ಮುಖ್ಯ ಕೋಚ್ ಹುದ್ದೆಯಲ್ಲಿದ್ದಾರೆ. 5 ಬಾರಿ ಸಿಎಸ್‌ಕೆ ಚಾಂಪಿಯನ್‌ ಆಗಿ ಹೊರಹೊಮ್ಮುವಲ್ಲಿ ಇವರ ಶ್ರಮವಿದೆ. ಅಷ್ಟೇ ಅಲ್ಲದೇ ಧೋನಿ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.

ನವೆಂಬರ್‌ 2021 ರಿಂದ ದ್ರಾವಿಡ್‌ ಕೋಚ್‌ ಹುದ್ದೆಯನ್ನು ಅಲಂಕರಿಸಿದ್ದು ಜೂನ್‌ನಲ್ಲಿ ಅವಧಿ ಅಂತ್ಯವಾಗಲಿದೆ. ವಿಶ್ವಕಪ್‌ ಕ್ರಿಕೆಟ್‌ ನಂತರ ಟೀಂ ಇಂಡಿಯಾದ ಕೋಚ್‌ ಹುದ್ದೆಗೆ ಬಿಸಿಸಿಐ ಈಗಾಗಲೇ ಜಾಹೀರಾತು ಪ್ರಕಟಿಸಿದೆ.

ಸ್ಟಿಫನ್‌ ಫ್ಲೇಮಿಂಗ್‌ ಟ್ರ್ಯಾಕ್‌ ರೆಕಾರ್ಡ್‌ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಅವರನ್ನೇ ಕೋಚ್‌ ಆಗಿ ನೇಮಕ ಮಾಡಲು ಬಿಸಿಸಿಐ ಉತ್ಸುಕವಾಗಿದೆ ಎಂದು ವರದಿಯಾಗಿದೆ.

2027ರವರೆಗೆ ಒಪ್ಪಂದಕ್ಕೆ ಸಹಿ ಹಾಕಬೇಕಾದ ಕಾರಣ ಫ್ಲೇಮಿಂಗ್‌ ಕಡೆಯಿಂದ ಇಲ್ಲಿಯವರೆಗೆ ಯಾವುದೇ ಖಚಿತ ನಿರ್ಧಾರ ಪ್ರಕಟವಾಗಿಲ್ಲ. ಹಿಂದೆ ರಾಹುಲ್‌ ದ್ರಾವಿಡ್‌ ಅವರನ್ನು ಕೋಚ್‌ ಹುದ್ದೆ ನೇಮಿಸಲು ಮುಂದಾದಾಗ ಆಸಕ್ತಿ ತೋರಿಸಿರಲಿಲ್ಲ. ಮನವೊಲಿಸಿದ ಬಳಿಕ ಅವರು ಒಪ್ಪಿಕೊಂಡಿದ್ದರು. ಅದೇ ರೀತಿ ಫ್ಲೇಮಿಂಗ್‌ ವಿಚಾರದಲ್ಲೂ ಸಂಭವಿಸಿದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಗೌತಮ್ ಗಂಭೀರ್, ಜಸ್ಟಿನ್ ಲ್ಯಾಂಗರ್, ಮಹೇಲಾ ಜಯವರ್ಧನೆ ಸೇರಿದಂತೆ ಹಲವರು ಹೆಸರು ಕೋಚ್‌ ಹುದ್ದೆಗೆ ಕೇಳಿ ಬಂದಿದೆ. ಚೆನ್ನೈ ಐಪಿಎಲ್‌ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಿರುವ ಕಾರಣ ಈಗ ಧೋನಿ ಮೂಲಕ ಬಿಸಿಸಿಐ ಫ್ಲೇಮಿಂಗ್‌ ಅವರನ್ನು ಮನವೊಲಿಸುತ್ತಿದೆ ಎನ್ನಲಾಗುತ್ತಿದೆ.

 

Ad
Ad
Nk Channel Final 21 09 2023
Ad