Bengaluru 22°C
Ad

ಮಣಿಪಾಲ: “ಆತ್ಮವಿಕ್ರಯ” ಎಂಬ ಗಮಕ ವಾಚಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ

Udupi

ಉಡುಪಿ: ಶಿವ ಪ್ರೇರಣಾ ಚಾರಿಟೇಬಲ್ ಟ್ರಸ್ಟ್ (ರಿ.) ಸರಳೇಬೆಟ್ಟು ಮಣಿಪಾಲ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ಗಮಕವಾಚನ ವ್ಯಾಖ್ಯಾನ ಕಾರ್ಯಕ್ರಮ (ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯದಿಂದ) “ಆತ್ಮ ವಿಕ್ರಯ” ಎಂಬ ಗಮಕ ವಾಚಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ರತ್ನ ಸಂಜೀವ ಕಲಾಮಂಡಲ ಸರಳೇಬೆಟ್ಟು ಮಣಿಪಾಲ ಇಲ್ಲಿ ನೆರವೇರಿತು.

Ad
300x250 2

ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸತೀಶ್ ಕುಮಾರ್ ಕೆಮ್ಮಣ್ಣು, ತಾಲೂಕು ಅಧ್ಯಕ್ಷರಾದ ಪ್ರೊ. ಎಂಎಲ್ ಸಾಮಗ, ಗಮಕ ವ್ಯಾಖ್ಯಾನಕಾರರಾದ ಡಾ.ರಾಘವೇಂದ್ರ ರಾವ್, ಗಮಕ ವಾಚಕಿ ಮಂಜುಳಾ ಮಂಚಿ, ಪಾಟೀಲ್ ಕ್ಲೋತ್ ಸ್ಟೋರ್ ಮಾಲೀಕರಾದ ಗಣೇಶ್ ಪಾಟೀಲ್ ಹಾಗೂ ರಮಾನಂದ ಸಾಮಂತ್,ಸಂಗೀತ ಶಿಕ್ಷಕಿ ಉಷಾ ಹೆಬ್ಬಾರ್ ಉಪಸ್ಥಿತರಿದ್ದರು.

ಶ್ರೀಯುತ ನರಸಿಂಹ ನಾಯಕ್ ಇವರು ಕಾರ್ಯಕ್ರಮ ನಿರೂಪಿಸಿದರು. ಹಾರ್ಮೋನಿಯಂ ಗುರುಗಳಾದ ನಿತ್ಯಾನಂದ ನಾಯಕ್ ಹಾಗೂ ತಬಲ ಗುರುಗಳಾದ ನಾಗರಾಜ್ ಕರ್ವಿ (ಸಂಸ್ಥೆಯ ಶಿಕ್ಷಕರು) ಹಾಗೂ ಇತರರು ಜೊತೆಗಿದ್ದರು.

Ad
Ad
Nk Channel Final 21 09 2023
Ad