Ad

ವೈದ್ಯಶ್ರೀ ಪ್ರಶಸ್ತಿಗೆ ಭಾಜರಾದ ಕಲಬುರಗಿಯ ಏಳು ಜನ ವೈದ್ಯರು

ಅತ್ಯುತ್ತಮ ವೈದ್ಯಕೀಯ ಸೇವೆಗಾಗಿ ಜಿಲ್ಲೆಯ ಏಳು ವೈದ್ಯರು ರಾಜ್ಯ ಸರ್ಕಾರ ನೀಡುವ 'ವೈದ್ಯ ಶ್ರೀ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಲಬುರಗಿ : ಅತ್ಯುತ್ತಮ ವೈದ್ಯಕೀಯ ಸೇವೆಗಾಗಿ ಜಿಲ್ಲೆಯ ಏಳು ವೈದ್ಯರು ರಾಜ್ಯ ಸರ್ಕಾರ ನೀಡುವ ‘ವೈದ್ಯ ಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಜ್ಯ ಸರ್ಕಾರಿ ಆಯುಷ್ ವೈದ್ಯಕೀಯ ಅಧಿಕಾರಿಗಳ ಅಸೋಸಿಯೇಷನ್‌ ಸಂಘಟನಾ ಕಾರ್ಯದರ್ಶಿಯೂ ಆಗಿರುವ ಆರ್‌ಸಿಎಚ್‌ಒ ಡಾ.ಶರಣಬಸಪ್ಪ ಕ್ಯಾತನಾಳ, ರಾಷ್ಟ್ರೀಯ ಬಾಯಿ ಕಾರ್ಯಕ್ರಮ ಹಾಗೂ ದಂತ ಆರೋಗ್ಯ ಅಧಿಕಾರಿ ಶಹಾಬಾದ್‌ನ ಡಾ.ಸಂಧ್ಯಾ ಕಾನೇಕರ್, ಯಡ್ರಾಮಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಉಮೇಶ ಶರ್ಮಾ, ಆಳಂದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಪ್ರಮೋದ್, ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ವೈದ್ಯಾಧಿಕಾರಿ ಡಾ.ಅಮರೇಶ್, ಜೇವರ್ಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯಾಧಿಕಾರಿ ಡಾ.ಲಕ್ಷ್ಮಣ ಪೂಜಾರಿ ಹಾಗೂ ಅಫಜಲಪುರ ತಾಲ್ಲೂಕಿನ ರಾವೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಪ್ರಸನ್ನ ಕಟ್ಟಿ ಪ್ರಶಸ್ತಿ ಪುರಸ್ಕೃತರು.

Ad
300x250 2

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

Ad
Ad
Nk Channel Final 21 09 2023
Ad