Bengaluru 26°C
Ad

ಹೊಸ ಹುದ್ದೆಗಳೊಂದಿಗೆ ಆರ್‌ಸಿಬಿ ತಂಡಕ್ಕೆ ಡಿಕೆ ರಿಎಂಟ್ರಿ

Dk (1)

ಮುಂಬೈ: ಈ ಬಾರಿಯ ಐಪಿಎಲ್  ​ನೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ವಿದಾಯ ಹೇಳಿದ್ದ ದಿನೇಶ್ ಕಾರ್ತಿಕ್ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ. ಬದಲಾಗಿ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ.

Ad
300x250 2

ಅದರಂತೆ ಐಪಿಎಲ್ 2025 ರಲ್ಲಿ ದಿನೇಶ್ ಕಾರ್ತಿಕ್ ಆರ್​ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಹುದ್ದೆಯೊಂದಿಗೆ ಮೆಂಟರ್ ಆಗಿಯೂ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಇಲ್ಲಿ ಆರ್​ಸಿಬಿ ಫ್ರಾಂಚೈಸಿಯು ದಿನೇಶ್ ಕಾರ್ತಿಕ್​ಗೆ ಎರಡು ಜವಾಬ್ದಾರಿ ವಹಿಸಿದೆ.

ಅಹದಾಬಾದ್​ನಲ್ಲಿ ನಡೆದ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿದ ಬೆನ್ನಲ್ಲೇ ಆರ್​ಸಿಬಿ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಐಪಿಎಲ್​ನಿಂದ ನಿವೃತ್ತಿ ಘೋಷಿಸಿದ್ದರು.

ಐಪಿಎಲ್​ನಲ್ಲಿ ಒಟ್ಟು 257 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್ 22 ಅರ್ಧಶತಕಗಳೊಂದಿಗೆ ಒಟ್ಟು 4842 ರನ್ ಕಲೆಹಾಕಿದ್ದಾರೆ. ಈ ವೇಳೆ 97 ರನ್ ಬಾರಿಸಿದ್ದು ಅವರ ಗರಿಷ್ಠ ಸ್ಕೋರ್. ಇದಲ್ಲದೆ ಧೋನಿ ಬಳಿಕ ಅತೀ ಹೆಚ್ಚು ಪಂದ್ಯವಾಡಿದ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ಡಿಕೆ ಹೆಸರಿನಲ್ಲಿದೆ. ಇದೀಗ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿರುವ ದಿನೇಶ್ ಕಾರ್ತಿಕ್ ಆರ್​ಸಿಬಿ ಪರ ಬ್ಯಾಟಿಂಗ್ ಕೋಚ್/ಮೆಂಟರ್ ಆಗಿ ಹೊಸ ಇನಿಂಗ್ಸ್ ಆರಂಭಿಸಲಿರುವುದು ವಿಶೇಷ.

 

Ad
Ad
Nk Channel Final 21 09 2023
Ad