Ad

ಘೋಷಣೆ ಕೂಗಿದ ಪ್ರತಿ ಪಕ್ಷದ ಸಂಸದರಿಗೆ ನೀರು ಕೊಟ್ಟ ಮೋದಿ : ವಿಡಿಯೋ ವೈರಲ್

ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ನರೇಂದ್ರ ಮೋದಿ, ರಾಹುಲ್‌ ಗಾಂಧಿ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ಈ ವೇಳೆ ನರೇಂದ್ರ ಮೋದಿ ಅವರನ್ನು ಪ್ರತಿಪಕ್ಷದ ಸಂಸದರು ಪದೇ ಪದೇ ಅಡ್ಡಿಪಡಿಸಿ ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸಿದರು.

ಹೊಸದಿಲ್ಲಿ: ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ನರೇಂದ್ರ ಮೋದಿ, ರಾಹುಲ್‌ ಗಾಂಧಿ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ಈ ವೇಳೆ ನರೇಂದ್ರ ಮೋದಿ ಅವರನ್ನು ಪ್ರತಿಪಕ್ಷದ ಸಂಸದರು ಪದೇ ಪದೇ ಅಡ್ಡಿಪಡಿಸಿ ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸಿದರು.

Ad
300x250 2

ಆ ಸಂದರ್ಭದಲ್ಲಿ ತಮ್ಮ ಮಾತಿಗೆ ಅಡ್ಡಿಯಾಗುತ್ತಿದ್ದ ಪ್ರತಿ ಪಕ್ಷ ಸಂಸದರಿಗೆ ಮೋದಿ ಒಂದು ಲೋಟ ನೀರು ಕೊಟ್ಟಿರುವ ಘಟನೆಯೂ ನಿನ್ನೆ ನಡೆದಿತ್ತು. ಇದೀಗ ಈ ವಿಡಿಯೋ ಸಮಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದೆ.

ನೀಟ್‌ ಅಕ್ರಮ, ಮಣಪುರ ಹಿಂಸಾಚಾರ ಮೊದಲ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ನಾಯಕರು ಸದನದ ಬಾವಿಳಿದು ಪ್ರತಿಭಟನೆ ನಡೆಸಿದ್ದರು. ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಒಂದು ಕ್ಷಣದಲ್ಲಿ ಪ್ರತಿಪಕ್ಷ ನಾಯಕರ ವರ್ತನೆ ಮಿತಿಮೀರುತ್ತಿದ್ದಂತೆ ಪ್ರಧಾನಿ ಮೋದಿ ತಮ್ಮ ಟೇಬಲ್‌ ಮೇಲಿದ್ದ ಒಂದು ಲೋಟ ನೀರನ್ನು ಅವರಿಗೆ ನೀಡಿದ್ದಾರೆ.

ವಿರೋಧ ಪಕ್ಷದ ಸಂಸದರೊಬ್ಬರು ಅದನ್ನು ಸ್ವೀಕರಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದ್ದು, ಇದನ್ನು ಪ್ರಧಾನಿಯವರ ಸದ್ಭಾವನೆ ಮತ್ತು ಸಂಯಮದ ಸಂಕೇತವೆಂದು ಎಂದು ನೆಟ್ಟಿಗರು ಕರೆದಿದ್ದಾರೆ.

Ad
Ad
Nk Channel Final 21 09 2023
Ad