Ad

‘ಈ ಟಿ20 ವಿಶ್ವಕಪ್ ಗೆಲುವು ನಿನ್ನದೂ ಕೂಡ’; ಅನುಷ್ಕಾಗೆ ವಿರಾಟ್​ ಕೊಹ್ಲಿ ಪ್ರೀತಿಯ ಪತ್ರ

Vk

ಮುಂಬೈ: ಜೂನ್ 29ರಂದು ನಡೆದ ಟಿ20 ವಿಶ್ವಕಪ್ ಫೈನಲ್​ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾನ ಸೋಲಿಸಿದೆ. ಈ ಪಂದ್ಯ ಗೆದ್ದ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರು ಟಿ20 ಫಾರ್ಮ್ಯಾಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

Ad
300x250 2

ಈ ಪಂದ್ಯ ಗೆಲ್ಲಲು ಪ್ರತಿಯೊಬ್ಬ ಆಟಗಾರ ಹಾಕಿದ ಶ್ರಮ ತುಂಬಾನೇ ದೊಡ್ಡದು. ವಿಶೇಷ ಎಂದರೆ ಫೈನಲ್​​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ನೀಡಿದ ಬೆಂಬಲವನ್ನು ಸ್ಮರಿಸಿದ್ದಾರೆ. ಅವರ ಪಾತ್ರವನ್ನು ಶ್ಲಾಘಿಸಿದ್ದಾರೆ.

ವಿರಾಟ್ ಕೊಹ್ಲಿ ಅವರು ಕ್ರಿಕೆಟ್​ನಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಮಕ್ಕಳನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಅನುಷ್ಕಾ ಶರ್ಮಾ ಅವರೇ ತೆಗೆದುಕೊಂಡಿದ್ದಾರೆ. ಈ ಕಾರಣದಿಂದಲೇ ಅವರು ಚಿತ್ರರಂಗದಿಂದ ದೂರ ಇದ್ದಾರೆ. ಈ ತ್ಯಾಗವನ್ನು ವಿರಾಟ್ ಅವರು ಪರೋಕ್ಷವಾಗಿ ಸ್ಮರಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಪ್ರೀತಿಯಿಂದ ಪೋಸ್ಟ್ ಹಾಕಿದ್ದಾರೆ.

‘ನೀನಿಲ್ಲದೆ ಇದೆಲ್ಲವೂ ಸಾಧ್ಯವಿರಲಿಲ್ಲ. ನೀನು ನನ್ನನ್ನು ವಿನಮ್ರವಾಗಿ ಇರುವಂತೆ ಮಾಡಿದೆ. ನೀನು ಎಲ್ಲವನ್ನೂ ಪ್ರಾಮಾಣಿಕವಾಗಿ ಹೇಳುತ್ತೀಯಾ. ನಾನು ನಿನಗೆ ಸದಾ ಕೃತಜ್ಞ. ಈ ಗೆಲುವು ನನ್ನದಷ್ಟೇ ನಿನ್ನದೂ ಕೂಡ ಹೌದು. ನೀನು ನೀನಾಗಿರುವುದಕ್ಕೆ ಐ ಲವ್​ ಯೂ, ಧನ್ಯವಾದಗಳು’ ಎಂದು ಅನುಷ್ಕಾ ಅವರನ್ನು ವಿರಾಟ್ ಟ್ಯಾಗ್ ಮಾಡಿದ್ದಾರೆ.

Ad
Ad
Nk Channel Final 21 09 2023
Ad