Bengaluru 27°C
Ad

ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ‘ಬಜರಂಗ್ ಪೂನಿಯಾ’ ಅಮಾನತು

Bajrang Punia

ನವದೆಹಲಿ: ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಗಾಗಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆ ಭಾನುವಾರ ಅಮಾನತುಗೊಳಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

ಕಳೆದ ತಿಂಗಳು ಟ್ರಯಲ್ಸ್ ಸಮಯದಲ್ಲಿ ಡೋಪ್ ಪರೀಕ್ಷೆಗೆ ತನ್ನ ಮಾದರಿಯನ್ನು ನೀಡಲು ನಿರಾಕರಿಸಿದ್ದಕ್ಕಾಗಿ ಪುನಿಯಾ ಅವರನ್ನು ತಾತ್ಕಾಲಿಕ ಅಮಾನತುಗೊಳಿಸಲಾಯಿತು.

ಮಾರ್ಚ್ ನಲ್ಲಿ ನಡೆದ ಆಯ್ಕೆ ಟ್ರಯಲ್ಸ್ ನಂತರ ಡೋಪ್ ಪರೀಕ್ಷೆಗೆ ತನ್ನ ಮಾದರಿಯನ್ನು ನೀಡಲು ನಿರಾಕರಿಸಿದ ಕುಸ್ತಿಪಟುವಿಗೆ ಏಜೆನ್ಸಿ ಚಾರ್ಜ್ ನೋಟಿಸ್ ನೀಡುವವರೆಗೆ ಪುನಿಯಾ ಮೇಲೆ ವಿಧಿಸಲಾಗಿದ್ದ ತಾತ್ಕಾಲಿಕ ಅಮಾನತು ಆದೇಶವನ್ನು ನಾಡಾದ ಶಿಸ್ತು ಸಮಿತಿ ಈ ಹಿಂದೆ ಹಿಂತೆಗೆದುಕೊಂಡಿತ್ತು ಎಂದು ತಿಳಿದು ಬಂದಿದೆ.

Ad
Ad
Nk Channel Final 21 09 2023
Ad