Ad

ಮಳೆ ಆರ್ಭಟ: ಕೊಡಗಿನಲ್ಲಿ ಭಾರೀ ತೂಕದ ವಾಹನ ಸಂಚಾರಕ್ಕೆ ನಿಷೇಧ ಹೇರಿದ ಜಿಲ್ಲಾಧಿಕಾರಿ

ಮಳೆ ಆರ್ಭಟ ಜೋರಾಗಿದ್ದು, ಕೊಡಗಿನಲ್ಲಿ ಭಾರಿ ಮಳೆಗೆ  ವಾಹನ ಸಂಚಾರ ನಿಷೇಧ ಹೇರಿ ಜಿಲ್ಲಾಧಿಕಾರಿ ಡಾ‌ ವೆಂಕಟರಾಜಾ ಆದೇಶ ಹೊರಡಿಸಿದ್ದಾರೆ.

ಮಡಿಕೇರಿ: ಮಳೆ ಆರ್ಭಟ ಜೋರಾಗಿದ್ದು, ಕೊಡಗಿನಲ್ಲಿ ಭಾರಿ ಮಳೆಗೆ  ವಾಹನ ಸಂಚಾರ ನಿಷೇಧ ಹೇರಿ ಜಿಲ್ಲಾಧಿಕಾರಿ ಡಾ‌ ವೆಂಕಟರಾಜಾ ಆದೇಶ ಹೊರಡಿಸಿದ್ದಾರೆ.

Ad
300x250 2

ರಸ್ತೆ ಕುಸಿತ ತಡೆಯಲು ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಮರಳು, ಮರದ ಧಿಮ್ಮಿ ಸಾಗಾಣಿಕೆ ಲಾರಿಗಳಿಗೂ ನಿಷೇಧ ಹೇರಲಾಗಿದೆ. 18,500 ಕೆಜಿಗಿಂತ ಅಧಿಕ ಭಾರದ ವಾಹನಗಳ ಸಂಚಾರ ನಿಷೇಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಆದೇಶ ಅನುಷ್ಠಾನಕ್ಕೆ ಜಿಲ್ಲೆಯ ಗಡಿಗಳಲ್ಲಿ 24 ಗಂಟೆಯೂ ನಿಗಾ ಇಡಲಾಗಿದೆ. ಸಾರಿಗೆ, ಪೊಲೀಸ್ ಸಿಬ್ಬಂದಿ ಹೆದ್ದಾರಿಯಲ್ಲಿ ಪೆಟ್ರೊಲಿಂಗ್ ನಡೆಸಲಿದ್ದಾರೆ. ಹಾಲು, ಇಂಧನ, ಅನಿಲ ಪೂರೈಸುವ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಮಳೆಗಾಲ‌ ಮುಗಿಯುವವರೆಗೂ ಜಿಲ್ಲೆಯಲ್ಲಿ ಬೃಹತ್ ವಾಹನಗಳ‌ ಸಂಚಾರ ನಿಷೇಧವಿರಲಿದ್ದು.  ಜುಲೈ 01ರಿಂದ 30ರ ವರೆಗೆ ನಿಷೇಧ ಹೇರಿ ಆದೇಶ ಹೊರಡಿಸಲಾಗಿದೆ.

ಸರಕು ಸಾಗಾಣೆ ವಾಹನಗಳು ಪ್ರತಿ ದಿನ ಸಂಚರಿಸುವುದರಿಂದ ರಸ್ತೆ ಬದಿಯ ಮಣ್ಣು ಕುಸಿಯುತ್ತಿದೆ. ಇದರಿಂದ ರಸ್ತೆಯ ಮೇಲೆ ಮಣ್ಣು ಬಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತಿದೆ. ಮಳೆಯಿಂದಾಗಿ ರಸ್ತೆ ಕುಸಿತ ಭೀತಿ ಕೂಡ ಎದುರಾಗಿದೆ. ಈ ಎಲ್ಲಾ ಕಾರಣದಿಂದಾಗಿ ಭಾರೀ ತೂಕದ ವಾಹನಗಳಿಗೆ ನಿಷೇಧ ಹೇರಲಾಗಿದೆ.

18,500 ಕೆಜಿಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ವಾಹನ, ಮಲ್ಟಿ ಆಕ್ಸಿಲ್ ಟ್ರಕ್‌ಗಳ ಸಂಚಾರ ಮತ್ತು ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್‌, ಶಿಪ್ ಕಾರ್ಗೋ ಕಂಟೈನರ್ಸ್‌, ಲಾಂಗ್ ಚಾಸಿಸ್ ವಾಹನಗಳು ಮತ್ತು ಮರಳು ಸಾಗಾಣಿಕೆ, ಮರದ ದಿಮ್ಮಿಗಳನ್ನು ಸಾಗಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಮಳೆಗಾಲ ಮುಗಿಯುವವರೆಗೆ ನಿರ್ಭಂದಿಸಲಾಗಿದೆ.

Ad
Ad
Nk Channel Final 21 09 2023
Ad