ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ನ ಈಕ್ವೆಸ್ಟ್ರೀಯನ್(ಕುದುರೆ ಸವಾರಿ) ವೈಯಕ್ತಿಕ ಡ್ರೆಸ್ಸೇಜ್ ವಿಭಾಗದಲ್ಲಿ ಭಾರತದ ಅನುಷ್ ಅಗರ್ವಾಲಾ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಇದು ಈ ಈವೆಂಟ್ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕವಾಗಿದೆ. ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ 71.706 ಅಂಕ ಪಡೆದು ನಾಲ್ಕನೇ ಸ್ಥಾನಿಯಾಗಿ 15 ಮಂದಿ ಸ್ಪರ್ಧಿಸುವ ಫೈನಲ್ಗೆ ಅರ್ಹತೆ ಪಡೆದಿದ್ದರು. ಫೈನಲ್ನಲ್ಲಿ 73.030 ಅಂಕ ಪಡೆದ ಕಂಚಿಗೆ ತೃಪ್ತಿಪಟ್ಟರು.
ಇದೇ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಭಾರತದ ಮತೋರ್ವ ಕುದುರೆ ಸವಾರ ಹೃದಯ್ ವಿಪುಲ್ ಪದಕ ಗೆಲ್ಲುವಲ್ಲಿ ವಿಫಲರಾದರು. ಅರ್ಹತಾ ಸುತ್ತಿನಲ್ಲಿ ಅವರು 73.8873 ಅಂಕಗಳಿಸಿ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್ನಲ್ಲಿ ಇದೇ ಪ್ರದರ್ಶನ ತೋರುವಲ್ಲಿ ಎಡವಿದರು.
Medal Alert🚨 in Equestrian🏇
Bronze🥉 it is for Anush Agarwalla in Individual Final Event, marking 🇮🇳's 1⃣st ever individual🎖️in Dressage
Well done & many congratulations on your🥉#Cheer4India#HallaBol#JeetegaBharat#BharatAtAG22 pic.twitter.com/P4Cf9G9KZK
— SAI Media (@Media_SAI) September 28, 2023