ಮುಂಬಯಿ: ಭಾರತದ 19ರ ಕೆಳಹರೆಯದ ತಂಡಕ್ಕೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಪುತ್ರ ಅರ್ಜುನ್ ಆಯ್ಕೆಯಾಗಿದ್ದಾರೆ.
ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿರುವ 19ರ ಕೆಳಹರೆಯದ ತಂಡದಲ್ಲಿ ಅರ್ಜುನ್ ಸ್ಥಾನ ಪಡೆದಿದ್ದಾರೆ. ಈ ಪ್ರವಾಸದಲ್ಲಿ ತಂಡವು ಎರಡು ನಾಲ್ಕು ದಿನಗಳ ಪಂದ್ಯ ಮತ್ತು ಐದು ಏಕದಿನ ಪಂದ್ಯಗಳನ್ನು ಆಡಲಿದೆ.
ಅರ್ಜುನ್ ತೆಂಡೂಲ್ಕರ್ ಅವರು ಎಡಗೈ ವೇಗಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್.
ಅರ್ಜುನ್ ಕೆಲಕಾಲ ಇಂಗ್ಲೆಂಡ್ ನಲ್ಲಿ ಅಭ್ಯಾಸ ನಡೆಸಿದ್ದಾರೆ. ಅವರು ಇಂಗ್ಲೆಂಡ್ ತಂಡದೊಂದಿಗೆ ಕೂಡ ಅಭ್ಯಾಸ ಮಾಡಿದ್ದರು.