ನವದೆಹಲಿ : ಕೊರೋನಾ ಸೋಂಕಿತರಿಗೆ ನೆರವಾಗಲು ಅನೇಕ ಮಂದಿ ಮುಂದೆ ಬರುತ್ತಿದ್ದು, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಕೂಡ 2 ಕೋಟಿ ರೂ . ದೇಣಿಗೆ ನೀಡಿದ್ದಾರೆ .
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ದಂಪತಿ ಕೋವಿಡ್ ರಿಲೀಫ್ ನಿಧಿ ಸಂಗ್ರಹ ಅಭಿಯಾನ ಆರಂಭಿಸಿದ್ದು , ಇದರ ಮೊದಲ ಹೆಜ್ಜೆಯಾಗಿ 2 ಕೋಟಿ ರೂ . ನೀಡಿದ್ದಾರೆ . ಕೋವಿಡ್ ಪರಿಹಾರಕ್ಕಾಗಿ 7 ಕೋಟಿ ರೂ . ಸಂಗ್ರಹಿಸುವ ಗುರಿ ಹೊಂದಿದ್ದಾರೆ .
ಎಲ್ಲರ ಸುರಕ್ಷತೆಗಾಗಿ ನಾವು ಪ್ರಾರ್ಥನೆ ಮಾಡುತ್ತಿದ್ದೇವೆ . ನಮ್ಮ ಪ್ರಾರ್ಥನೆಗೆ ನೀವೆಲ್ಲರೂ ಜೊತೆಯಾಗಿ ಎಂದು ಅನುಷ್ಕಾ ಶರ್ಮಾ ಕೇಳಿಕೊಂಡಿದ್ದಾರೆ .