ಬೆಂಗಳೂರು: ಭಾರತವು ಟೆಸ್ಟ್ ಕ್ರಿಕೆಟ್ ಇತಿಹಾಸದ 500ನೇ ಪಂದ್ಯ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದು, ಈ ಖುಷಿಯನ್ನು ವಿಭಿನ್ನವಾಗಿ ಆಚರಿಸಲು ಬಿಸಿಸಿಐ ತೀರ್ಮಾನಿಸಿ, ಅಭಿಮಾನಿಗಳು ಆಯ್ಕೆ ಮಾಡಿದ ಕನಸಿನ ತಂಡವನ್ನು ಸೋಮವಾರ ಪ್ರಕಟಿಸಿದೆ.
#DreamTeam ಹ್ಯಾಶ್ ಟ್ಯಾಗ್ ಬಳಸಿ #500ನೇ ಟೆಸ್ಟ್ ಪಂದ್ಯಕ್ಕಾಗಿ ಅಭಿಮಾನಿಗಳು ತಂಡವನ್ನು ಆಯ್ಕೆ ಮಾಡಬಹುದೆಂದು ಬಿಸಿಸಿಐ ತನ್ನ ಅಧೀಕೃತ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಕರೆ ನೀಡಿದ್ದು, ಇದರಂತೆ ಅಭಿಮಾನಿಗಳು ಭಾರತದ ಯಶಸ್ವೀ ನಾಯಕರೆಂದೆನಿಸಿಕೊಂಡ ಧೋನಿ ಅವರನ್ನು ಮತ್ತೆ ನಾಯಕನಾಗಿ ಆಯ್ಕೆ ಮಾಡಿದ್ದಾರೆ.
ರಾಹುಲ್ ದ್ರಾವಿಡ್ ಶೇ.96 ರಷ್ಟು ಮತ ಪಡೆದು ತಂಡದಲ್ಲಿ ಆಯ್ಕೆಯಾಗಿದ್ದು, ಕಪೀಲ್ ದೇವ್ ಶೇ.91 ರಷ್ಟು ಮತ ಪಡೆದರೆ, 12ನೇ ಆಟಗಾರನಾಗಿ ಯುವರಾಜ್ ಹಾಗೂ ಕ್ರಿಕೆಟ್ ದೇವರು ಸಚಿನ್ ಈ ತಂಡದಲ್ಲಿ ಅಭಿಮಾನಿಗಳಿಂದ ಶೇ 73 ರಷ್ಟು ಮತಗಳನ್ನು ಗಳಿಸಿದ್ದಾರೆ.