ಶ್ರಿಲಂಕಾ ತಂಡವು ಬಾಂಗ್ಲಾ ವಿರುದ್ಧ ಭರ್ಜರಿ ಜಯಗಳಿಸಿದೆ. ಬಾಂಗ್ಲಾ ನೀಡಿದ್ದ 172 ರನ್ಗಳ ಗುರಿ ಬೆನ್ನತ್ತಿದ್ದ, ಲಂಕಾ ತಂಡ 18.5 ಓವರ್ಗಳಲ್ಲಿ ಗುರಿ ಮುಟ್ಟಿದೆ.
ಲಂಕಾ ಪರ ಓಪನರ್ ಆಗಿ ಕಣಕ್ಕಿಳಿದ ಕುಸಾಲ್ ಪೆರೇರಾ ಹಾಗೂ ಪಾತುಮ್ ನಿಸಾಂಕ ಉತ್ತಮ ರನ್ ಕಲೆಹಾಕುವಲ್ಲಿ ಎಡವಿದರು. ಕುಸಾಲ್ ಪೆರೇರಾ ಕೇವಲ ಒಂದು ರನ್ಗಳಿಸಿ ನಸುಮ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದರು.
ನಂತರ ಕೂಡಿದ ಚರಿತ್ ಅಸಲಂಕ, ಪಾತುಮ್ ನಿಸಾಂಕ ಜೊಡಿ 70 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಆದರೆ 24ರನ್ಗಳಿಸಿದ್ದಾಗ ಪಾತುಮ್ ನಿಸಾಂಕ ಶಕೀಬ್ ಅಲ್ ಹಸನ್ ವಿಕೆಟ್ ಒಪ್ಪಿಸಿದರು.
ನಂತರ ಬಂದ ಆವಿಷ್ಕಾ ಫೆರ್ನಾಂಡೊ ಈ ಪಂದ್ಯದಲ್ಲೂ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೊಮ್ಮೆ ಪ್ಲಾಪ್ ಆದರು. ನಂತರ ಕ್ರಿಸ್ಗಿಳಿದ ಕಳೆದ ಪಂದ್ಯದ ಹೀರೋ ಹಸರಂಗ ಕೇವಲ 6 ರನ್ಗೆ ತಮ್ಮ ಆಟವನ್ನ ಅಂತ್ಯಗೊಳಿಸಿದರು.
ನಂತರ ಚರಿತ್ ಅಸಲಂಕ ಜೊತೆಗೂಡಿದ ಭಾನುಕಾ ರಾಜಪಕ್ಷೆ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಚರಿತ್ ಅಸಲಂಕ ಅಜೆಯ 80 ರನ್ಗಳಿಸಿದರೆ, ಭಾನುಕಾ ರಾಜಪಕ್ಷೆ 53 ರನ್ಗಳಿಸುವ ಮೂಲಕ ಸೂಪರ್ 12 ಸುತ್ತಿನಲ್ಲಿ ಲಂಕಾಗೆ ಮೊದಲ ಜಯ ತಂದುಕೊಟ್ಟರು.
ಬಾಂಗ್ಲಾ ಪರ ಉತ್ತಮ ಬೌಲಿಂಗ್ ಮಾಡಿದ ಶಕೀಬ್ ಅಲ್ ಹಸನ್ 2 , ಸೈಫುದ್ದೀನ್ 1, ನಸುಮ್ ಅಹ್ಮದ್ 2, ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಬಾಂಗ್ಲಾ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದ್ದು, ಲಂಕಾ ತಂಡಕ್ಕೆ 172ರನ್ಗಳ ಟಾರ್ಗೆಟ್ ನೀಡಿತ್ತು.