ಯುಎಇಯಲ್ಲಿ ಐಪಿಎಲ್ ಪಂದ್ಯಗಳು ಪುನರಾರಂಭವಾಗಿದ್ದು, ಜಗತ್ತಿನಾದ್ಯಂತ ಕ್ರೀಡಾಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಆದರೆ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಐಪಿಎಲ್ ಮ್ಯಾಚ್ ನೋಡುವ ಭಾಗ್ಯ ಇಲ್ಲ.
ಇದರಲ್ಲಿ ಚಿಯರ್ ಗರ್ಲ್ಸ್ ಇರುತ್ತಾರೆ. ಮಹಿಳೆಯರು ಇದನ್ನು ನೋಡುವುದು ಸೂಕ್ತವಲ್ಲ ಎನ್ನುವುದು ತಾಲಿಬಾನಿಗಳ ಅಭಿಪ್ರಾಯ. ಐಪಿಎಲ್ ಟೂರ್ನಿ ಇಸ್ಲಾಂ ವಿರೋಧಿಯಾಗಿದೆ ಎಂಬ ಕಾರಣ ನೀಡಿ ಐಪಿಎಲ್ ಟೂರ್ನಿಗಳ ಪ್ರಸಾರವನ್ನು ತಾಲಿಬಾನ್ ರದ್ದು ಮಾಡಿದೆ. ತಾಲಿಬಾನ್ ಉಗ್ರರಿಗೆ ಕ್ರಿಕೆಟ್ ಇಷ್ಟ. ಆದರೆ ಮಹಿಳೆಯರು ಇದನ್ನು ನೋಡುವ ಬಗ್ಗೆ ವಿರೋಧವಿದೆ.