ಟೋಕಿಯೊ: ವಿಶ್ವ ಅಥ್ಲೆಟಿಕ್ಸ್ ರ್ಯಾಂಕಿಂಗ್ಸ್ ಪ್ರಕಾರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಗರಿಷ್ಠ 87.58 ಮೀಟರ್ ದೂರ ಜಾವೆಲಿನ್ ಎಸೆದಿರುವ ನೀರಜ್ ಚೋಪ್ರಾ ಎರಡನೇ ಸ್ಥಾನ ಪಡೆದಿದ್ದಾರೆ.
ಜರ್ಮನಿಯ ಜೊಹಾನ್ಸ್ ವೆಟರ್, 1396 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ನೀರಜ್ ಸ್ಕೋರ್ 1315 ಆಗಿದೆ.
ಒಲಿಂಪಿಕ್ಸ್ನಲ್ಲಿ ಗರಿಷ್ಠ 87.58 ಮೀಟರ್ ದೂರ ಜಾವೆಲಿನ್ ಎಸೆದಿರುವ 23 ವರ್ಷದ ನೀರಜ್ ಚೋಪ್ರಾ, ಚಿನ್ನ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು.
ನೀರಜ್ ಸಾಧನೆಯು ಟೋಕಿಯೊ ಒಲಿಂಪಿಕ್ಸ್ನ ಟ್ರ್ಯಾಕ್ ಮತ್ತು ಫೀಲ್ಡ್ನ ಗಮನಾರ್ಹ ಘಟನೆಗಳಲ್ಲಿ ಒಂದಾಗಿ ದಾಖಲಾಗಿದೆ.