ಟೋಕಿಯೋ : ಒಲಿಂಪಿಕ್ಸ್ ಲ್ಲಿ ಭಾರತದ ಭರವಸೆಯ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಸೆಮಿ ಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದು ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ. ಪುರುಷಯ 65 ಕೆ. ಜಿ. ಫ್ರೀಸ್ಟೈಲ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಬಜರಂಗ್ ಅವರು ಅಜೆರ್ಬೈಜಾನ್ ರಸ್ಲರ್ ಹಾಜಿ ಅಲಿಯೇವ್ ವಿರುದ್ಧ 5-12 ಅಂತರದಿಂದ ಸೋಲು ಕಂಡಿದ್ದಾರೆ. ಆದರೂ ಭಾರತದದ ಪದಕದ ಆಸೆ ಜೀವಂತವಾಗಿದೆ. ಕಂಚಿನ ಪದಕಕ್ಕಾಗಿ ಬಜರಂಗ್ ಮುಂದಿನ ಆಟ ಆಡಲಿದ್ದಾರೆ.
ಎದುರಾಳಿಯ ಆಕ್ರಮಣಕಾರಿ ಆಟದ ಎದುರು ಬಜರಂಗ್ಗೆ ಕೇವಲ 5 ಅಂಕ ಸಂಪಾದಿಸಲಷ್ಟೇ ಶಕ್ತವಾಯಿತು. ಕಂಚಿಗಾಗಿ ಬಜರಂಗ್ ಹಾಗೂ ರಷ್ಯಾದ ಗಾಡ್ಜಿಮುರಾದ್ ರಶಿದೋವ್ ಶನಿವಾರ ಕಾದಾಟ ನಡೆಸಲಿದ್ದಾರೆ. ಈ ಮೊದಲು ಪ್ರೀ-ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ ಬಜರಂಗ್, ಕಿರ್ಗಿಸ್ತಾನದ ಎರ್ನಾಜರ್ ಅಕ್ಮಟಾಲೀವ್ ವಿರುದ್ಧ ಮೇಲುಗೈ ಸಾಧಿಸಿದರು.
ನಂತರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಇರಾನಿನ ಮೊರ್ತೆಜಾ ಗಿಯಾಸಿ ಅವರನ್ನು 2-1ರ ಅಂತರದಿಂದ ಸೋಲಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟು ಪದಕದ ಭರವಸೆ ನೀಡಿದ್ದರು.
ಆದರೆ, ಸೆಮೀಸ್ನಲ್ಲಿ ಹಾಜಿ ಅಲಿಯೇವ್ ವಿರುದ್ಧ ಗೆಲುವಿಗೆ ಕಠಿಣ ಹೋರಾಟ ನಡೆಸಿದರಾದೂ ಗೆಲ್ಲಲಾಗದೆ ಸೋಲು ಕಂಡಿದ್ದಾರೆ.