News Karnataka Kannada
Sunday, May 19 2024
ಕ್ರೀಡೆ

ವಿರಾಟ್ ಕೊಹ್ಲಿ ಟೆಸ್ಟ್ ನಲ್ಲಿ ರನೌಟ್ ಆದ ಬಗ್ಗೆ ಕುತೂಹಲಕಾರಿ ಸಂಗತಿ ಇಲ್ಲಿದೆ!

Photo Credit :

ವಿರಾಟ್ ಕೊಹ್ಲಿ ಟೆಸ್ಟ್ ನಲ್ಲಿ ರನೌಟ್ ಆದ ಬಗ್ಗೆ ಕುತೂಹಲಕಾರಿ ಸಂಗತಿ ಇಲ್ಲಿದೆ!

ಅಡಿಲೇಡ್‌: ಅಡಿಲೇಡ್ ಓವಲ್ ಮೈದಾನ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಹಲವು ಅವಿಸ್ಮರಣೀಯ ನೆನಪುಗಳಿಗೆ ಕಾರಣವಾಗಿದೆ. ಕುತೂಹಲಕಾರಿ ಅಂಶವೆಂದರೆ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಎರಡೇ ಎರಡು ಬಾರಿ ಮಾತ್ರ ರನೌಟ್ ಆಗಿದ್ದಾರೆ. ಅದು ಇದೇ ಅಡಿಲೇಡ್ ಓವಲ್ ಮೈದಾನದಲ್ಲಿ ಅನ್ನೋದನ್ನ ನಾವು ಮರೆಯಬಾರದು.

ಸಾಮಾನ್ಯವಾಗಿ ಕ್ವಿಕ್ ಆಗಿ ರನ್ ಪಡೆಯಲು ಓಡುವ ವಿರಾಟ್ ಅವರನ್ನು ರನೌಟ್ ಮಾಡಲು ಫೀಲ್ಡರ್‌ಗಳು ಹರಸಾಹಸ ಪಡುತ್ತಾರೆ ಅಂದರೆ ತಪ್ಪಾಗೊಲ್ಲ ಬಿಡಿ. ಆದ್ರೂ ತಮ್ಮ ಮಿಂಚಿನ ಓಟದ ಮೂಲಕ ವಿರಾಟ್ ರನ್ ಕದಿಯುತ್ತಾರೆ.

ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ಮೊಟ್ಟ ಮೊದಲ ಪಿಂಕ್ ಬಾಲ್ ಹೊನಲು-ಬೆಳಕಿನ ಟೆಸ್ಟ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಶತಕದತ್ತ ಮುನ್ನುಗ್ಗಿದ್ದರು.

ಆದರೆ ಸಹ ಆಟಗಾರ ಅಜಿಂಕ್ಯ ರಹಾನೆ ಜೊತೆಗಿನ ಪರ್ಟ್ನರ್ ಶಿಪ್ ಸರಿಯಾಗಿ ಕೆಲಸ ಮಾಡದೇ ರನೌಟ್‌ ಆಗಬೇಕಾಯಿತು. ತಕ್ಷಣ ತಮ್ಮ ತಪ್ಪು ಒಪ್ಪಿಕೊಂಡ ಉಪ ನಾಯಕ ಅಜಿಂಕ್ಯ ರಹಾನೆ, ಕೊಹ್ಲಿ ಬಳಿ ಕ್ಷಮೆಯಾಚಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

204

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು