ಬೆಂಗಳೂರು: ವೆಸ್ಡ್ ಇಂಡೀಸ್ ನ ಸ್ಟಾರ್ ಕ್ರಿಕೆಟಿಗರಾದ ಡ್ವೇನ್ ಬ್ರಾವೋ ಹಾಗೂ ಕ್ರಿಸ್ ಗೇಲ್ ಅವರು ಈ ವರ್ಷದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಖತ್ ಹವಾ ಎಬ್ಬಿಸಿದ ಚಾಂಪಿಯನ್ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ.
ಬ್ರಾವೋ ಹಾಗೂ ಗೇಲ್ ಸ್ಕೋರ್ ಕಾಂಡೋಮ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಸ್ಕೋರ್ ಕಾಂಡೋಮ್ ನ ಜಾಹಿರಾತಿಗಾಗಿ ಚಾಂಪಿಯನ್ ಸಾಂಗ್ ನ್ನು ರಿಮೇಕ್ ಮಾಡಿದ್ದಾರೆ.
ಸ್ಕೋರ್ ಕಾಂಡೋಮ್ ಗಾಗಿ ರಿಮೇಕ್ ಆಗಿರುವ ಚಾಂಪಿಯನ್ ಸಾಂಗ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಈ ವರ್ಷದ ಟಿ-20 ವಿಶ್ವಕಪ್ ಗೆದ್ದ ಸಂಧರ್ಭದಲ್ಲಿ ಡ್ವೇನ್ ಬ್ರಾವೋ ಈ ಹಾಡನ್ನು ರಚಿಸಿದ್ದು, ಸಖತ್ ಸ್ಟೆಪ್ ಕೂಡ ಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಹವಾ ಎಬ್ಬಿಸಿತ್ತು.