News Karnataka Kannada
Friday, May 03 2024
ಬಾಲಿವುಡ್

ಭಾರತದ ‘ಚಿನ್ನದ ಹುಡುಗ’ನಿಗೆ ಸ್ಟಾರ್‌ ನಟ, ನಟಿಯರಿಂದ ಶುಭಾಶಯಗಳ ಸುರಿಮಳೆ

Neeraj Chopra Gold
Photo Credit :

ಮುಂಬೈ: ಟೋಕಿಯೊ ಒಲಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯರೆಂಬ ಕೀರ್ತಿಗೆ ಪಾತ್ರರಾದ ನೀರಜ್‌ ಚೋಪ್ರಾಗೆ ಶುಭಾಶಯಗಳ ಸುರಿಮಳೆಯಾಗಿತ್ತಿದೆ. ನೀರಜ್ ಅವರ ಸಾಧನೆಗೆ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಶುಭಾಶಯ ಸಲ್ಲಿಸಿದ್ದಾರೆ.

ಬಾಲಿವುಟ್ ನಟಿ ಅನುಷ್ಕಾ ಶರ್ಮಾ ‘ನೀವು ಇಡೀ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ಅಭಿನಂದನೆಗಳು ನೀರಜ್ ಚೋಪ್ರಾ’ ಎಂದು ಬರೆದಿದ್ದಾರೆ.

‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದಕ್ಕೆ ಅಭಿನಂದನೆಗಳು ನೀರಜ್ ಚೋಪ್ರಾ. ಈ ಮೂಲಕ ಹೆಚ್ಚಿನ ಶಕ್ತಿ ನಿಮಗೆ ದೊರೆತಿದೆ! ನೀವು ಮತ್ತು ನಿಮ್ಮ ಪೋಷಕರು ಭಾರತಕ್ಕೆ ಹೆಮ್ಮೆ ತಂದಿದ್ದೀರಿ ಇದು ಅದ್ಭುತ’ ಎಂದು ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.

ಅಭಿಷೇಕ್ ಬಚ್ಚನ್, ಕರೀನಾ ಕಪೂರ್, ರಣವೀರ್ ಸಿಂಗ್, ಅರ್ಜುನ್ ಕಪೂರ್, ವಿಕ್ಕಿ ಕೌಶಲ್ ಮತ್ತು ನಟಿ ರಕುಲ್ ಪ್ರೀತ್ ಸೇರಿದಂತೆ ಹಲವರು ಚೋಪ್ರಾಗೆ ಅಭಿನಂದನೆ ಸಲ್ಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು