ಬಿಹಾರ: ಸಿಡಿಲಿನ ಹೊಡೆತಕ್ಕೆ ಬಿಹಾರದ ಬಾಂಕಾ ಜಿಲ್ಲೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ.
ಬಾಂಕಾ ಜಿಲ್ಲೆಯಲ್ಲಿ ಸಿಡಿಲಿಗೆ 7 ಮಂದಿ ಮೃತಪಟ್ಟ ಸಂಗತಿಯಿಂದ ಬೇಸರವಾಗಿದೆ. ಮೃತ ಪಟ್ಟವರ ಕುಟುಂಬದ ಜೊತೆ ಬಿಹಾರ ಸರ್ಕಾರ ಇದೆ. ಮೃತರಿಗೆ ತೀವ್ರ ಸಂತಾಪಗಳು. ಸಿಡಿಲಿನ ಹೊಡೆತಕ್ಕೆ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಎಂದು ಆರೋಗ್ಯ ಸಚಿವ ಮಂಗಲ್ ಪಾಂಡೆ ಸಂತಾಪ ಸೂಚಿಸಿದ್ದಾರೆ.
ಎರಡು ದಶಕಗಳ ಬಳಿಕ ದೇಶದಾದ್ಯಂತ ಗುಡುಗು, ಸಿಡಿಲುಗಳು ಹೆಚ್ಚಾಗಿವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.