News Karnataka Kannada
Monday, April 29 2024
ಅಡುಗೆ ಮನೆ

ಗರಿ ಗರಿಯಾದ ಸಂಜಿರ ಮಾಡಲು ಬಲು ಸುಲಭ………

Sanjeera Food 08082021
Photo Credit :

ಸಿಹಿ ತಿಂಡಿಗಳಲ್ಲಿ ಒಂದಾಗಿರುವ ಸಂಜಿರ ತಿನ್ನಲು ಬಹು ರುಚಿಯಾಗಿರುವ ತಿನಿಸು. ಕರಾವಳಿ ಭಾಗದಲ್ಲಿ ಹೆಚ್ಚಿನವರು ಇಷ್ಟಪಡುವ ಈ ತಿಂಡಿ, ನೋಡುವಾಗ ತಿಂಡಿ ತಯಾರು ಮಾಡಲು ತುಂಬಾ ಕಷ್ಟಕರ ಎನಿಸಿದರು ಮಾಡಲು ತುಂಬಾ ಸುಲಭ.

ಬೇಕಾಗುವ ಸಾಮಗ್ರಿಗಳು

ಮೈದಾ– 1ಕಪ್
ರವೆ– ಸ್ವಲ್ಪ‌
ಅರಿಶಿನ ಪುಡಿ
ಉಪ್ಪು ಸ್ವಲ್ಪ
ತೆಂಗಿನ ತುರಿ
ಸಕ್ಕರೆ
ಎಣ್ಣೆ

ಮಾಡುವ ವಿಧಾನ: ಮೈದಾ, ಸ್ವಲ್ಪ ರವೆ, ಸ್ವಲ್ಪ ಅರಿಶಿನ, ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ಸ್ವಲ್ಪನೆ ನೀರು ಸೇರಿಸಿ ಚಪಾತಿ ಹದಕ್ಕೆ ಕಲಸಿ 20 ನಿಮಿಷ ಕಾಲ ಹಾಗೆಯೇ ಬಿಡಿ.

ನಂತರ ಒಂದು ಬಾಣಲೆಯಲ್ಲಿ ರವೆ ಹಾಕಿ ಹುರಿಯಿರಿ. ನಂತರ ಅದಕ್ಕೆ ತೆಂಗಿನ ತುರಿ, ಸಕ್ಕರೆ, ಏಲಕ್ಕಿ ಸೇರಿಸಿ 5 ನಿಮಿಷ ಹುರಿಯಿರಿ. ತಣ್ಣಗಾದ ಬಳಿಕ ಈ ಪಾಕವನ್ನು ಪೂರಿಯಷ್ಟು ಲಟ್ಟಿಸಿದ ಮೈದಾ ಹಿಟ್ಟಿನ ಒಳಗಡೆ ಇಟ್ಟು ತುಂಬಿರಿ. ನಂತರ ಮತ್ತೇ ಪೂರಿ ಹದಕ್ಕೆ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಬಿಡಿ.

ಇದೀಗ ರುಚಿಕರವಾದ ಸಂಜಿರ ತಿಂಡಿಯನ್ನು ಮನೆಯಲ್ಲೇ ಮಾಡಿ ಸವಿಯಿರಿ. ಇದನ್ನು 5 ದಿನಗಳ ಕಾಲ ಮನೆಯಲ್ಲೇ ಶೇಖರಣೆ ಮಾಡಿ ಸವಿಯಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು