ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ಗಳ ಜಯ ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಟಾಸ್ ಗೆದ್ದು ಚೇಸಿಂಗ್ ಮಾಡಲು ನಿರ್ಧರಿಸಿದ್ದ ಕೆಕೆಆರ್, ಬಲಿಷ್ಠ ಡೆಲ್ಲಿ ತಂಡವನ್ನು ಕೇವಲ 127 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಇನ್ನು 128 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಕೆಕೆಆರ್ 18.2 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಶುಬ್ನನ್ ಗಿಲ್ 33 ಎಸೆತಗಳಲ್ಲಿ ಒಂದು ಬೌಂಡರಿ 2 ಸಿಕ್ಸರ್ ಸಹಿತ 30, ನಿತೀಶ್ ರಾಣಾ 27 ಎಸೆತಗಳಲ್ಲಿ ಅಜೇಯ 36 ಮತ್ತು ಸುನೀಲ್ ನರೇನ್ 10 ಎಸೆತಗಳಲ್ಲಿ 21 ರನ್ಗಳಿಸಿ ಗೆಲುವಿನ ರೂವಾರಿಗಳಾದರು .
ಡೆಲ್ಲಿ ಕ್ಯಾಪಿಟಲ್ಸ್ ಪರ ಆವೇಶ್ ಖಾನ್ 13ಕ್ಕೆ 3, ಕಗಿಸೋ ರಬಾಡ 28ಕ್ಕೆ1, ಅಶ್ವಿನ್ 24ಕ್ಕೆ 2, ನಾರ್ಟ್ಜ್ 15ಕ್ಕೆ1 ವಿಕೆಟ್ ಪಡೆದು ಕೆಕೆಆರ್ ವಿರುದ್ಧ ಪ್ರಬಲ ಪೈಪೋಟಿ ನಡೆಸಿದರಾದರೂ ಗೆಲುವು ತಂದುಕೊಡಲು ವಿಫಲರಾದರು