News Karnataka Kannada
Saturday, May 04 2024
ಕ್ರೀಡೆ

2022 ಜನವರಿಯಲ್ಲಿ ರಣಜಿ ಟ್ರೋಫಿ ಟೂರ್ನಿ

Cricket Ball 10082021
Photo Credit :

ನವದೆಹಲಿ: ರಣಜಿ ಟ್ರೋಫಿ ಟೂರ್ನಿಯು 2022ರ ಜನವರಿ 5ರಿಂದ ಮಾರ್ಚ್ 20ರವರೆಗೆ ಆಯೋಜನೆಗೊಳ್ಳಲಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಗುರುವಾರ ಈ ವಿಷಯವನ್ನು ಬಹಿರಂಗಪಡಿಸಿದೆ. ಜೀವ ಸುರಕ್ಷಾ ವಾತಾವರಣದಲ್ಲಿ ಈ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಒಟ್ಟು 38 ತಂಡಗಳು ಕಣಕ್ಕಿಳಿಯಲಿವೆ.

2021–22ರ ದೇಶಿ ಋತುವನ್ನು ಮುಂಬರುವ ಅಕ್ಟೋಬರ್‌ 27ರಿಂದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯೊಂದಿಗೆ ಆರಂಭಿಸಲಿದೆ. ಐಪಿಎಲ್ ಮುಗಿದ ನಂತರ ಈ ಟೂರ್ನಿ ನಡೆಯಲಿರುವುದರಿಂದ ಪ್ರಮುಖ ಆಟಗಾರರು ತಮ್ಮ ರಾಜ್ಯ ತಂಡಗಳಲ್ಲಿ ಆಡುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಡಿಸೆಂಬರ್ 1ರಿಂದ 29ರವರೆಗೆ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯು ನಡೆಯಲಿದೆ. ಮಹಿಳೆಯರ ರಾಷ್ಟ್ರೀಯ ಏಕದಿನ ಟೂರ್ನಿಯೂ ಅಕ್ಟೋಬರ್ 20ರಿಂದ ನವೆಂಬರ್ 20ವರೆಗೆ ನಡೆಯುವುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು