News Karnataka Kannada
Saturday, April 27 2024
ಕ್ರೀಡೆ

ಟಿ-20 ವಿಶ್ವಕಪ್: ಸ್ಟುಡಿಯೋಗೆ ವಾಪಸ್ ಆದ ಸಂಜನಾ ಗಣೇಶನ್

Sanjana Ganeshan
Photo Credit :

ಯುಎಇಯಲ್ಲಿ ಟಿ-20 ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದೆ. ಅಕ್ಟೋಬರ್ 24ರಂದು ಭಾರತ-ಪಾಕಿಸ್ತಾನದ ಮಧ್ಯೆ ಮೊದಲ ಪಂದ್ಯ ನಡೆಯಲಿದೆ. ಪಂದ್ಯಕ್ಕೆ ಆಟಗಾರರು ಸಿದ್ಧತೆ ನಡೆಸುತ್ತಿದ್ದಾರೆ.

ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪ್ರಸ್ತುತ ತಂಡದಲ್ಲಿದ್ದು, ಅವರ ಪತ್ನಿ ಸಂಜನಾ ಗಣೇಶನ್ ಕೂಡ ಯುಎಇಯಲ್ಲಿದ್ದಾರೆ. ಸಂಜನಾ ಮತ್ತೊಮ್ಮೆ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಜನಾ ಗಣೇಶನ್ ಟಿವಿ ನಿರೂಪಕಿ. ಕ್ರಿಕೆಟ್ ಸೇರಿದಂತೆ ಅನೇಕ ಕ್ರೀಡಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾರೆ. ಟಿವಿ ಸಂದರ್ಶನ, ಆಟಗಾರರ ವಿಶೇಷ ಸಂದರ್ಶನ ಸೇರಿದಂತೆ ವಿಷಯ ತಜ್ಞರ ಜೊತೆ ಮಾತುಕತೆ ನಡೆಸುತ್ತಾರೆ.

ಸಂಜನಾ ಹಾಗೂ ಬುಮ್ರಾ ಮದುವೆ ನಂತ್ರ ಸಂಜನಾ ಬ್ರೇಕ್ ತೆಗೆದುಕೊಂಡಿದ್ದರು. ಅವರು ಸ್ಟುಡಿಯೋದಲ್ಲಿ ಕಾಣಿಸಿಕೊಂಡಿರಲಿಲ್ಲ. ಬುಮ್ರಾ ಜೊತೆ ಅವರು ಪ್ರವಾಸ ಕೈಗೊಂಡಿದ್ದರು. ಇಂಗ್ಲೆಂಡ್ ನಲ್ಲಿ ನಟಿ ಅನುಷ್ಕಾ ಸೇರಿದಂತೆ ಆಟಗಾರರ ಪತ್ನಿಯರ ಜೊತೆ ಸಂಜನಾ ಕೂಡ ಕಾಣಿಸಿಕೊಂಡಿದ್ದು, ಅವರ ಫೋಟೋ ವೈರಲ್ ಆಗಿತ್ತು.

ಬುಮ್ರಾ ಹಾಗೂ ಸಂಜನಾ, ಮಾರ್ಚ್ 15,2021 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದ ಸಂಜನಾ ಶೋನಲ್ಲೂ ಕಾಣಿಸಿಕೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು