ಮೆಲ್ಬೊರ್ನ್: ಚೇತೇಶ್ವರ ಪೂಜಾರ ಶತಕ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅರ್ಧಶತಕಗಳ ನೆರವಿನಿಂದ ಭಾರತ ಮೂರನೇ ಟೆಸ್ಟ್ ನಲ್ಲಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಏಳು ವಿಕೆಟ್ ನಷ್ಟಕ್ಕೆ 443 ರನ್ ಮಾಡಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಪೂಜಾರ ತನ್ನ 17ನೇ ಶತಕ ಪೂರೈಸಿದರು. ಈ ಶತಕದೊಂದಿಗೆ 16 ಶತಕಗಳನ್ನು ಬಾರಿಸಿರುವ ಸೌರವ್ ಗಂಗೂಲಿಯನ್ನು ಹಿಂದಿಕ್ಕಿದರೆ, ಈಗ 17 ಶತಕ ಬಾರಿಸಿರುವ ವಿವಿಎಸ್ ಲಕ್ಷ್ಮಣ್ ಸಾಲಿನಲ್ಲಿದ್ದಾರೆ.
ಪೂಜಾರ 106 ರನ್ ಮಾಡಿ ಪ್ಯಾಟ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ 82 ರನ್ ಮಾಡಿ ಮಿಷೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಔಟಾದರು. ರಹಾನೆ 34, ರೋಹಿತ್ ಶರ್ಮಾ 63 ಮತ್ತು ರಿಷಬ್ ಪಂತ್ 39 ರನ್ ಬಾರಿಸಿ ತಂಡ 400 ರನ್ ಗಡಿದಾಟಲು ನೆರವಾದರು.