ದುಬೈ: ಐಪಿಎಲ್ ನಲ್ಲಿ ಮೊದಲ ಸಲ ಆಡುತ್ತಿರುವ ಕಾಶ್ಮೀರದ ಆಟಗಾರ ಸಮದ್ ಅವರು ತನ್ನ ಮೇಲೆ ಜವಾಬ್ದಾರಿ ಇದೆ ಎಂದು ಹೇಳಿರುವರು.
ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರವಾಗಿ ಆಡುತ್ತಿರುವ ಸಮದ್, 12 ಟಿ20 ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ 252 ರನ್ ಮಾಡಿರುವರು. ಇವರು ಕಾಶ್ಮೀರದ ಮೂರನೇ ಆಟಗಾರನಾಗಿ ಐಪಿಎಲ್ ನಲ್ಲಿ ಆಡುತ್ತಿರುವರು. ಇದಕ್ಕೆ ಮೊದಲು ಫರ್ವೇಜ್ ರಸೂಲ್ ಮತ್ತು ರಸಿಖ್ ಸಲಾಂ ಆಡಿದ್ದರು.
ಸನ್ ರೈಸರ್ಸ್ ತಂಡದ ತರಬೇತಿ ತಂಡದಲ್ಲಿರುವಂತಹ ಮುತ್ತಯ್ಯ ಮುರಳೀಧರನ್, ಲಕ್ಷ್ಮಣ್ ಮತ್ತು ಕೋಚ್ ಟ್ರೆವೊರ್ ಬೇಯ್ಲಿಸ್ ಅವರಿಂದ ಸಾಕಷ್ಟು ಕಲಿಯುತ್ತಿದ್ದೇನೆ. ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ಆದರೆ ಜಜವಾಬ್ದಾರಿಯಿಂದ ಆಡಬೇಕಾಗಿದೆ ಎಂದರು.