ಮೊಹಾಲಿ : ವಿರಾಟ್ ಕೊಹ್ಲಿ ಭಾರತಕ್ಕಾಗಿ ಐತಿಹಾಸಿಕ ಟೆಸ್ಟ್ ಆಡಲು ಸಜ್ಜಾಗುತ್ತಿದ್ದು, ನಾನು ನೂರನೇ ಟೆಸ್ಟ್ ಆಡುತ್ತೇನೆ ಎಂದು ಎಣಿಸಿಯೇ ಇರಲಿಲ್ಲ ಎಂದು ಮಾಜಿ ನಾಯಕ ಹೇಳಿದ್ದಾರೆ.
ಶುಕ್ರವಾರ ಶ್ರೀಲಂಕಾ ವಿರುದ್ಧ ಕೊಹ್ಲಿ 100ನೇ ಟೆಸ್ಟ್ ಆರಂಭವಾಗಲಿದ್ದು, ಭಾರತೀಯ ಆಟಗಾರರು ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ಭಾರಿ ನಿರೀಕ್ಷೆ ಮೂಡಿಸಿದೆ.
‘100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಇದು ಸುದೀರ್ಘ ಪ್ರಯಾಣವಾಗಿದೆ. ಆ 100 ಟೆಸ್ಟ್ ಪಂದ್ಯಗಳನ್ನು ಆಡುವ ಅವಧಿಯಲ್ಲಿ ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅಂತರಾಷ್ಟ್ರೀಯ ಕ್ರಿಕೆಟನ್ನು 100 ಕ್ಕೆ ತಲುಪಿಸಲು ಸಾಧ್ಯವಾಗಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಎಂದು ಕೊಹ್ಲಿ ಬಿಸಿಸಿಐ ಪೋಸ್ಟ್ ಮಾಡಿದ ವಿಡಿಯೋ ದಲ್ಲಿ ಹೇಳಿದ್ದಾರೆ.
100 ಟೆಸ್ಟ್ಗಳನ್ನು ಆಡಿದ ಮೈಲಿಗಲ್ಲು ಸಾಧಿಸಿದ 12 ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಸಿದ್ಧರಾಗಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್ ಲೋಕದ ಹೆಗ್ಗುರುತಾಗಿ ಕಾಣಿಸಿಕೊಳ್ಳಲಿದ್ದಾರೆ.