Bengaluru 23°C
Ad

ಮಕ್ಕಳ ಮೇಲೆ ಪೋಷಕರು ಒತ್ತಡ ತರುವುದೆಷ್ಟು ಸರಿ: ಇದು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ

ಮಕ್ಕಳನ್ನು ತಾವು ಅಂದು ಕೊಂಡಂತೆ ಬೆಳೆಸಬೇಕು ಎಂದು ಪೋಷಕರು ತಾವು ಏನಾಗಲಿಲ್ಲವೋ ಅದನ್ನು ಮಕ್ಕಳು  ಆಗಬೇಕೆಂದು ಬಯಸುತ್ತಾ ಅದಕ್ಕಾಗಿ ಅವರ ಮೇಲೆ ಪೋಷಕರು ಒತ್ತಡ ತರುವುದು ಮಾಮೂಲಿಯಾಗಿದೆ.

ಮಕ್ಕಳನ್ನು ತಾವು ಅಂದು ಕೊಂಡಂತೆ ಬೆಳೆಸಬೇಕು ಎಂದು ಪೋಷಕರು ತಾವು ಏನಾಗಲಿಲ್ಲವೋ ಅದನ್ನು ಮಕ್ಕಳು  ಆಗಬೇಕೆಂದು ಬಯಸುತ್ತಾ ಅದಕ್ಕಾಗಿ ಅವರ ಮೇಲೆ ಪೋಷಕರು ಒತ್ತಡ ತರುವುದು ಮಾಮೂಲಿಯಾಗಿದೆ. ಹೀಗಾಗಿ ಆಡಬೇಕಾದ ವಯಸ್ಸಿನಲ್ಲಿ ಒತ್ತಡದಿಂದ ದಿನ ಕಳೆಯುವಂತಾಗಿದೆ.

ನಮ್ಮ ಮಕ್ಕಳು ಏನಾದರೊಂದು ಸಾಧನೆ ಮಾಡಬೇಕೆಂಬ ಬಯಕೆ ಮಕ್ಕಳ ಮೇಲೆ ಒತ್ತಡವಾಗುತ್ತಿದೆ. ಒಂದು ವೇಳೆ ಮಕ್ಕಳು  ತಾವು ಅಂದುಕೊಂಡಂತೆ ನಡೆಯದೆ ಹೋದರೆ ಅವರಿಗೆ ಹೊಡೆಯುವುದು, ಬಡಿಯುವುದು ಕೆಲವೊಮ್ಮೆ ಮಾಡುತ್ತಾರೆ. ಇದು ಮುಂದೆ ಎಂತಹ ಸಂಕಷ್ಟಕ್ಕೆ ತಂದೊಡ್ಡುತ್ತದೆ ಎಂಬ ಯೋಚನೆ ಬಹಳಷ್ಟು ಪೋಷಕರಿಗೆ ಇದ್ದಂತಿಲ್ಲ.

ಪ್ರತಿಯೊಬ್ಬ ತಂದೆ ತಾಯಿಗೂ ಮಕ್ಕಳೇ ಆಸ್ತಿ. ಅವರನ್ನು ಓದಿಸಬೇಕು, ಉನ್ನತ ಹುದ್ದೆಗೆ ಕಳುಹಿಸಬೇಕು, ಹೀಗೆ ತಮ್ಮದೇ ಆದ  ಕನಸನ್ನು ಕಾಣುತ್ತಿರುತ್ತಾರೆ. ತಮ್ಮ ಮಕ್ಕಳು ಬೇರೆಯವರಿಗಿಂತ ಯಾವುದರಲ್ಲೂ ಕಡಿಮೆಯಾಗಬಾರದೆಂಬ ಉದ್ದೇಶದಿಂದಲೇ ತಮ್ಮ ಅತೃಪ್ತ ಆಸೆ ಆಕಾಂಕ್ಷೆಗಳನ್ನೆಲ್ಲ ಮಕ್ಕಳ ಮೇಲೆ ಒತ್ತಡ ಹೇರಿ ಅವರ ಮೂಲಕ ಈಡೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.  ಇದು ತಪ್ಪೇನಲ್ಲ. ಆದರೆ ಆ ಭರದಲ್ಲಿ ಮಕ್ಕಳ ಬಗ್ಗೆಯೂ ಗಮನಹರಿಸಬೇಕಾಗುತ್ತದೆ.

ತಮ್ಮ ಮಕ್ಕಳಿಗೆ ಇಷ್ಟವಾದುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡದೆ ತಮ್ಮ ಅಭಿಲಾಷೆಯಂತೇ  ಆಗಬೇಕೆಂದು ಹಠ ಹಿಡಿಯುತ್ತಾರೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಗೊತ್ತಿದ್ದರೂ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳುವ ತವಕದಲ್ಲಿ ಕೆಲವೊಮ್ಮೆ ಮಕ್ಕಳ ಭವಿಷ್ಯವನ್ನೇ ಹಾಳು ಮಾಡಿಬಿಡುತ್ತಾರೆ. ತಮ್ಮ ಮಕ್ಕಳು ಹೆಚ್ಚು ಅಂಕ ತೆಗೆಯಬೇಕೆಂದು ಪೋಷಕರು ಸರ್ಕಸ್ ಮಾಡುತ್ತಾರೆ. ಮಕ್ಕಳಿಗೆ ವಿದ್ಯೆಯನ್ನು ಇಷ್ಟಪಟ್ಟು ಕಲಿಯಲು ಬಿಡದೆ ಒತ್ತಡ ಹೇರುತ್ತೇವೆ. ಕಲಿಯದಿದ್ದರೆ ಹೊಡೆದು ಕಲಿಸುತ್ತೇವೆ.

ಕೋಪ ಬಂದಾಗ ಮಕ್ಕಳಿಗೆ ಎಲ್ಲೆಂದರಲ್ಲಿ ಹೊಡೆಯುವ ತಂದೆ  ತಾಯಿಗಳಿದ್ದಾರೆ. ಆದರೆ ಹಾಗೆ ಹೊಡೆಯುವ ಮುನ್ನ ಹೆತ್ತವರು ಎಚ್ಚರ ವಹಿಸುವುದು ಅಗತ್ಯ. ಮಕ್ಕಳು ಕಲಿಯಲಿಲ್ಲ ಅಂದ್ರೆ ತಲೆ ಮೇಲೆ ಎರಡೇಟು ಹೊಡೆಯಿರಿ ಕಲಿಯುತ್ತಾರೆ ಎಂಬ ಮಾತಿದೆ. ಆದರೆ ಹಾಗೆ ಮಾಡುವುದು ತಪ್ಪು. ಏಕೆಂದರೆ ಈ ಕುರಿತಂತೆ ಸತತ 50 ವರ್ಷಗಳ ಅಧ್ಯಯನ ನಡೆಸಲಾಗಿದ್ದು, ಮಕ್ಕಳ ತಲೆ ಮೇಲೆ ಅಥವಾ ಹಿಂದೆ ಹೊಡೆಯುವುದರಿಂದ ಮಕ್ಕಳ ಮಾನಸಿಕ ಸ್ಥಿತಿ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಹೇಳಿದೆ.

ಮಕ್ಕಳ  ತಲೆ ಮೇಲೆ ಹೊಡೆಯುವುದರಿಂದ ಮಾನಸಿಕ ಖಿನ್ನತೆ ಹಾಗೂ ಗ್ರಹಣ ಶಕ್ತಿಯನ್ನು ಮಕ್ಕಳು ಕಳೆದುಕೊಳ್ಳುತ್ತಾರಂತೆ. ಈ ಬಗ್ಗೆ 1,60,000 ಮಕ್ಕಳನ್ನು ಸಂಶೋಧನೆಗೊಳಪಡಿಸಲಾಗಿದೆ. ಇನ್ನಾದರೂ ಮಕ್ಕಳಿಗೆ ಹೊಡೆಯುವ ಮುನ್ನ ಪೋಷಕರೇ ಎಚ್ಚರ ವಹಿಸಿ ಕೋಪದಲ್ಲಿ ಹೊಡೆಯುವ ಒಂದೇಟು ಮಕ್ಕಳ ಭವಿಷ್ಯವನ್ನು ಹಾಳು ಮಾಡಬಹುದು. ಮೊದಲಿಗೆ ಅವರ ವಯಸ್ಸಿಗಿಂತ ಹೆಚ್ಚಿನ ಒತ್ತಡ ತರುವುದೇ ತಪ್ಪು ಅದರ ಜತೆಗೆ ಹೊಡೆಯುವುದು ಬಡಿಯುವ ಮುನ್ನ ಎಚ್ಚರದಿಂದ  ಇರಿ. ಮಕ್ಕಳು ಆಡುತ್ತಲೇ ಬೆಳೆಯಲಿ ಎಂಬುದನ್ನು ಮರೆಯಬಾರದಷ್ಟೆ.

Ad
Ad
Nk Channel Final 21 09 2023
Ad