Bengaluru 26°C
Ad

ಸ್ಯಾಮ್‌ಸಂಗ್‌ನಿಂದ ಮ್ಯೂಸಿಕ್ ಫ್ರೇಮ್ ಬಿಡುಗಡೆ : ಇದರ ವಿಷೇಶತೆ ಹೀಗಿದೆ

ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಸೋಮವಾರ ಭಾರತದಲ್ಲಿ ತನ್ನ ಮ್ಯೂಸಿಕ್ ಫ್ರೇಮ್ ಬಿಡುಗಡೆ ಮಾಡಿದೆ. ಇದೊಂದು ವೈರ್‌ಲೆಸ್ ಸ್ಪೀಕರ್ ಆಗಿದ್ದು, ಕಲೆಯ ಒಂದು ರೂಪದಂತೆ ಭಾಸವಾಗುತ್ತದೆ.

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಸೋಮವಾರ ಭಾರತದಲ್ಲಿ ತನ್ನ ಮ್ಯೂಸಿಕ್ ಫ್ರೇಮ್ ಬಿಡುಗಡೆ ಮಾಡಿದೆ. ಇದೊಂದು ವೈರ್‌ಲೆಸ್ ಸ್ಪೀಕರ್ ಆಗಿದ್ದು, ಕಲೆಯ ಒಂದು ರೂಪದಂತೆ ಭಾಸವಾಗುತ್ತದೆ. ಮ್ಯೂಸಿಕ್ ಫ್ರೇಮ್ ಡಾಲ್ಬಿ ಅಟ್ಮೋಸ್ ಮತ್ತು ವೈರ್‌ಲೆಸ್ ಮ್ಯೂಸಿಕ್ ಸ್ಟ್ರೀಮಿಂಗ್‌ನಂತಹ ಹೊಸ ಫೀಚರ್‌ಗಳನ್ನು ಹೊಂದಿದ್ದು, ಇದರ ಬೆಲೆ 23,990 ರೂ. ಆಗಿದೆ.

Ad
300x250 2

ನಿಜವಾದ ಫ್ರೇಮ್‌ನಂತೆಯೇ ಸ್ಯಾಮ್‌ಸಂಗ್ ಮ್ಯೂಸಿಕ್ ಫ್ರೇಮ್ ಗ್ರಾಹಕರಿಗೆ ವೈಯಕ್ತಿಕ ಫೋಟೋಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ. ಅಮೂಲ್ಯವಾದ ನೆನಪುಗಳನ್ನು ಕೆರಳಿಸುವ ಫೋಟೋಗಳನ್ನು ನೋಡುತ್ತಾ ಅಥವಾ ಕಲಾಕೃತಿಯ ಫೋಟೋವನ್ನು ನೋಡುತ್ತಾ ಸಂಗೀತವನ್ನು ಆಲಿಸುವ ಪ್ರಕ್ರಿಯೆಯು ಬಳಕೆದಾರರಿಗೆ ಹೊಸ ಮತ್ತು ಮಜವಾದ ಗಾಢ ಅನುಭವವನ್ನು ಒದಗಿಸಲಿದೆ.

ಹೊಸ ಮ್ಯೂಸಿಕ್ ಫ್ರೇಮ್ ಅಸಾಧಾರಣ ತಂತ್ರಜ್ಞಾನವನ್ನು ಪಿಚ್ಚರ್ ಫ್ರೇಮ್ ರೂಪದಲ್ಲಿ ನೀಡುತ್ತಿದ್ದು, ಅದರ ವಿಶಿಷ್ಟವಾದ, ಸೊಗಸಾದ ವಿನ್ಯಾಸದ ಮೂಲಕ ಸಿನಿಮೀಯ ಆಡಿಯೊ ಅನುಭವವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಡಾಲ್ಬಿ ಅಟ್ಮೋಸ್ ತಂತ್ರಜ್ಞಾನ
ಪ್ರತೀ ಕೋನದಿಂದಲೂ ಕೇಳಿಸುವ ಮೂರು ಆಯಾಮದ ಆಡಿಯೋ ವಿಶೇಷ ಅನುಭವ ನೀಡುತ್ತದೆ. ಧ್ವನಿಯನ್ನು ಆಲಿಸುವ ಆನಂದವನ್ನು ಹೆಚ್ಚಿಸುವ ಹಾಗೂ ಚಲನಚಿತ್ರವನ್ನು ವೀಕ್ಷಿಸುವಾಗ, ಸಂಗೀತವನ್ನು ಕೇಳುವಾಗ ಅಥವಾ ಆಟಗಳನ್ನು ಆಡುವಾಗ ಇಡಾಲ್ಬಿ ಅಟ್ಮೋಸ್ ತಂತ್ರಜ್ಞಾನವು ಆಡಿಯೋ ಅನುಭವವನ್ನು ಹೊಸ ಎತ್ತರಕ್ಕೆ ಏರಿಸುತ್ತದೆ.

ಸ್ಥಿರವಾದ ಧ್ವನಿ ಗುಣಮಟ್ಟ
ಕೋಣೆಯ ಯಾವುದೇ ಮೂಲೆಯಿಂದಲೂ ಸಮತೋಲಿತವಾದ ಮತ್ತು ಸ್ಥಿರವಾದ ಆಡಿಯೊ ಗುಣಮಟ್ಟವನ್ನು ಪಡೆಯಬಹುದು. ಸ್ಥಳ ಯಾವುದೇ ಇದ್ದರೂ ಈ ಉತ್ಪನ್ನವು ಅತ್ಯುತ್ತಮ ಧ್ವನಿ ಆಲಿಸುವ ಅನುಭವವನ್ನು ನೀಡುತ್ತದೆ. ಸ್ಪೀಕರ್ ಅಸಮರ್ಪಕ ಧ್ವನಿಯನ್ನು ತೆಗೆದುಹಾಕುತ್ತದೆ ಮತ್ತು ಕೋಣೆಯ ಎಲ್ಲಾ ಭಾಗದಲ್ಲಿಯೂ ಸ್ಫಟಿಕ-ಸ್ಪಷ್ಟವಾದ ಆಡಿಯೊವನ್ನು ನೀಡುತ್ತದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಆರಾಮಾಗಿ ನಿಯಂತ್ರಿಸಬಹುದಾದ ವ್ಯವಸ್ಥೆ
ಮ್ಯೂಸಿಕ್ ಫ್ರೇಮ್ ಅನ್ನು ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ನಂತಹ ಬಿಲ್ಟ್-ಇನ್ ವಾಯ್ಸ್ ಅಸಿಸ್ಟೆಂಟ್‌ಗಳ ಮೂಲಕ ಆರಾಮಾಗಿ ನಿಯಂತ್ರಿಸಬಹುದಾಗಿದೆ. ಬಳಕೆದಾರರು ಮಾತನಾಡುವ ಮೂಲಕವೇ ಸರಳವಾಗಿ ಆಜ್ಞೆಗಳನ್ನು ನೀಡಬಹುದು ಮತ್ತು ಆ ಮಾತಿಗೆ ಮ್ಯೂಸಿಕ್ ಫ್ರೇಮ್ ಪ್ರತಿಕ್ರಿಯಿಸುತ್ತದೆ. ಯಾವುದೇ ಮ್ಯಾನ್ಯುವಲ್ ಕೆಲಸ ಮಾಡದೆಯೇ ಪ್ಲೇ, ಪಾಸ್, ಟ್ರ್ಯಾಕ್ ಸ್ಕಿಪ್ಪಿಂಗ್ ಮತ್ತು ವಾಲ್ಯೂಮ್ ಅಡ್ಜಸ್ಟ್ ಮೆಂಟ್ ಇತ್ಯಾದಿಯನ್ನು ಮಾಡಬಹುದಾಗಿದೆ. ಈ ಫೀಚರ್ ಮೂಲಕ ಗ್ರಾಹಕರು ದೂರದಲ್ಲಿ ಇದ್ದೇ ಅನುಕೂಲಕರವಾಗಿ ಆಡಿಯೊ ಅನುಭವದ ಮೇಲೆ ನಿಯಂತ್ರಣವನ್ನು ಸಾಧಿಸಬಹುದಾಗಿದೆ.

ವೈಯಕ್ತೀಕರಿಸಿದ ಧ್ವನಿ ಸೌಲಭ್ಯ
ಅತ್ಯಾಧುನಿಕ ರೂಮ್ ಅನಾಲಿಸಿಸ್ ಮತ್ತು ಆಪ್ಟಿಮೈಸೇಶನ್ ತಂತ್ರಜ್ಞಾನದ ಮೂಲಕ ಆಡಿಯೋ ಸೌಲಭ್ಯವನ್ನು ನಿರ್ದಿಷ್ಟ ಕೋಣೆಯ ಪರಿಸರಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದು. ಸ್ಪೇಸ್‌ಫಿಟ್ ಸೌಂಡ್ ಪ್ರೊ ಫೀಚರ್ ಕೋಣೆಯ ವಾತಾವರಣವನ್ನು ವಿಶ್ಲೇಷಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಧ್ವನಿ ಮಟ್ಟವನ್ನು ಸರಿಹೊಂದಿಸುತ್ತದೆ. ಆಯಾ ಜಾಗಕ್ಕೆ ಅನುಗುಣವಾಗಿ ಅತ್ಯುತ್ತಮವಾದ ಆಡಿಯೊ ಗುಣಮಟ್ಟವನ್ನು ಒದಗಿಸುತ್ತದೆ. ಈ ತಂತ್ರಜ್ಞಾನವು ವೈಯಕ್ತೀಕರಿಸಿದ ಧ್ವನಿ ಪರಿಪೂರ್ಣತೆಗೆ ತಕ್ಕಂತೆ ಒಂದೇ ರೀತಿಯ ಆಡಿಯೋವನ್ನು ಒದಗಿಸುತ್ತದೆ.

ಕ್ಯೂ-ಸಿಂಫನಿ ಇಂಟಿಗ್ರೇಷನ್
ಬಳಕೆದಾರರು ತಮ್ಮ ಟಿವಿಗಳ ಎರಡೂ ಬದಿಯಲ್ಲಿ ಎರಡು ಮ್ಯೂಸಿಕ್ ಫ್ರೇಮ್‌ಗಳನ್ನು ಇರಿಸುವ ಮೂಲಕ ಉತ್ಕೃಷ್ಟ ಸ್ಟಿರಿಯೊ ಧ್ವನಿಗಾಗಿ ಕ್ಯೂ- ಸಿಂಫನಿ ಅನ್ನು ಬಳಸಿಕೊಳ್ಳಬಹುದು. ಸರೌಂಡ್ ಸೌಂಡ್‌ಗಾಗಿ, ಬಳಕೆದಾರರು ತಮ್ಮ ಟಿವಿಯ ಮುಂದೆ ಸೌಂಡ್‌ಬಾರ್ ಅನ್ನು ಇರಿಸಬಹುದು ಮತ್ತು ಹಿಂಭಾಗದ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲು ಎದುರು ಗೋಡೆಯ ಮೇಲೆ ಮ್ಯೂಸಿಕ್ ಫ್ರೇಮ್ ಅನ್ನು ಇರಿಸಬಹುದು. ಸ್ಮಾರ್ಟ್ ಥಿಂಗ್ಸ್ ಆಪ್ ಮೂಲಕ ಬಳಕೆದಾರರು ಈಕ್ವಲೈಜರ್ ಸೆಟ್ಟಿಂಗ್‌ಗಳನ್ನು ತಮ್ಮ ಆದ್ಯತೆಗಳಿಗೆ ತಕ್ಕಂತೆ ಹೊಂದಿಸಬಹುದು.

Ad
Ad
Nk Channel Final 21 09 2023
Ad