Bengaluru 22°C
Ad

71 ಸಾವಿರ ಕಿ.ಮಿ ವೇಗದಲ್ಲಿ ಇಂದು ರಾತ್ರಿ ಅಪ್ಪಳಿಸಲಿದೆ ವಿಮಾನ ಗಾತ್ರದ ಉಲ್ಕೆ

024 ಎಲ್‌‌ಜೆಡ್4 ಅನ್ನೋ ಉಲ್ಕೆಯೊಂದು ಬರೋಬ್ಬರಿ 71 ಸಾವಿರ ಕಿಲೋಮೀಟರ್ ವೇಗದಲ್ಲಿ ಉಲ್ಕೆಯೊಂದು ಭೂಮಿಯತ್ತ ಧಾವಿಸುತ್ತಿದೆ. ಇಂದು ರಾತ್ರಿ ಈ ಉಲ್ಕೆ ಭೂಮಿಯತ್ತಆಗಮಿಸಲಿದೆ ನಾಸಾ ಎಚ್ಚರಿಸಿದೆ.

024 ಎಲ್‌‌ಜೆಡ್4 ಅನ್ನೋ ಉಲ್ಕೆಯೊಂದು ಬರೋಬ್ಬರಿ 71 ಸಾವಿರ ಕಿಲೋಮೀಟರ್ ವೇಗದಲ್ಲಿ ಉಲ್ಕೆಯೊಂದು ಭೂಮಿಯತ್ತ ಧಾವಿಸುತ್ತಿದೆ. ಇಂದು ರಾತ್ರಿ ಈ ಉಲ್ಕೆ ಭೂಮಿಯತ್ತಆಗಮಿಸಲಿದೆ ನಾಸಾ ಎಚ್ಚರಿಸಿದೆ. ಈ ಉಲ್ಕೆಯ ಗಾತ್ರ 72 ಅಡಿ ವಿಸ್ತೀರ್ಣ ಹೊಂದಿದೆ.ಅಂದರೆ ವಿಮಾನ ಗಾತ್ರದಷ್ಟಿರುವ ಉಲ್ಕೆ ಭೂಮಿಯತ್ತ ಧಾವಿಸುತ್ತಿದೆ. ಆದರೆ ಜನ ಸಮಾನ್ಯರು ಆತಂಕ ಪಡಬೇಕಿಲ್ಲ. ಕಾರಣ ಈ ಉಲ್ಕೆ ಭೂಮಿಯಿಂದ 1.80 ಮಿಲಿಯನ್ ಮೈಲುಗಳ ದೂರದದಲ್ಲಿ ಹಾದು ಹೋಗಲಿದೆ ಎಂದು ನಾಸಾ ಹೇಳಿದೆ.

ಒಟ್ಟು ಮೂರು ಉಲ್ಕೆಗಳು ಬಾಹ್ಯಾಕಾಶದಿಂದ ಪತನಗೊಂಡು ಭೂಮಿಯತ್ತ ಬೀಳಲಿದೆ. ಆದರೆ ಈ ಪೈಕಿ 024 ಎಲ್‌‌ಜೆಡ್4 ಅನ್ನೋ ಉಲ್ಕೆ ಭೂಮಿಗೆ ಹತ್ತರಿದಿಂದ ಹಾದು ಹೋಗಲಿದೆ. ಈ ಉಲ್ಕೆ ಪ್ರತಿ ಗಂಟೆಗೆ 71,109 ಕಿ.ಮೀ ಹಾಗೂ ಪ್ರತಿ ಸೆಕೆಂಡ್‌ಗೆ 21.42 ಕಿ.ಮೀ ವೇಗದಲ್ಲಿ ಭೂಮಿಯತ್ತ ಚಲಿಸುತ್ತಿದೆ. ಈ ಉಲ್ಕೆ ಭೂಮಿಯಿಂದ ಕೇವಲ 1,73,000 ಮೈಲಿ ದೂರದಿಂದ ಪಾಸ್ ಆಗಲಿದೆ.

 

Ad
Ad
Nk Channel Final 21 09 2023
Ad