Bengaluru 22°C
Ad

ಟೋಲ್‌ ಸಂಗ್ರಹಕ್ಕೆ ಬರುತ್ತಿದೆ ಸ್ಯಾಟಲೈಟ್‌ ಆಧಾರಿತ ವ್ಯವಸ್ಥೆ: ಏನಿದರ ಪ್ರಯೋಜನ ಗೊತ್ತಾ?

ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿನ ಟೋಲ್‌ ಸಂಗ್ರಹ ವ್ಯವಸ್ಥೆಯ ಬದಲಾವಣೆಗೆ ಚಿಂತನೆ ನಡೆಸಿದ್ದು, ಫಾಸ್ಟ್‌ಟ್ಯಾಗ್‌‌ ಟೋಲ್‌ ಸಂಗ್ರಹಕ್ಕಿಂತ ಭಿನ್ನವಾದ, ಸ್ಯಾಟಲೈಟ್‌ ಆಧಾರಿತ ಟೋಲ್‌ ಸಿಸ್ಟಂ ಜಾರಿಗೆ ತರುವುದು ಸರ್ಕಾರದ ಯೋಜನೆಯಾಗಿದೆ.

ನವದೆಹಲಿ: ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿನ ಟೋಲ್‌ ಸಂಗ್ರಹ ವ್ಯವಸ್ಥೆಯ ಬದಲಾವಣೆಗೆ ಚಿಂತನೆ ನಡೆಸಿದ್ದು, ಫಾಸ್ಟ್‌ಟ್ಯಾಗ್‌‌ ಟೋಲ್‌ ಸಂಗ್ರಹಕ್ಕಿಂತ ಭಿನ್ನವಾದ, ಸ್ಯಾಟಲೈಟ್‌ ಆಧಾರಿತ ಟೋಲ್‌ ಸಿಸ್ಟಂ ಜಾರಿಗೆ ತರುವುದು ಸರ್ಕಾರದ ಯೋಜನೆಯಾಗಿದೆ.

Ad
300x250 2

ಉಪಗ್ರಹ ಆಧಾರಿತವಾಗಿ ಇದು ಕಾರ್ಯ ನಿರ್ವಹಿಸಲಿದೆ. ಉಪಗ್ರಹ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲು ವಿವಿಧ ಜಾಗತಿಕ ಸಂಸ್ಥೆಗಳ ಜತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚರ್ಚೆ ನಡೆಸಿದೆ.

ಭಾರತದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಜಿಪಿಎಸ್ ಅಥವಾ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಫಾಸ್ಟ್‌ಟ್ಯಾಗ್‌ ಐಡಿಗಳನ್ನು ಸ್ಕ್ಯಾನ್ ಮಾಡುವ ಬದಲು, ವಾಹನದ ನಂಬರ್ ಪ್ಲೇಟ್ ಅನ್ನು ಸ್ಕ್ಯಾನ್ ಮಾಡಲಾಗುತ್ತದೆ.

ಇದಕ್ಕಾಗಿ ಹೆದ್ದಾರಿಗಳನ್ನು ವರ್ಚುವಲ್ ಟೋಲ್‌ನಿಂದ ಸಜ್ಜುಗೊಳಿಸಲಾಗುತ್ತದೆ. ಇದರಲ್ಲಿನ ಕ್ಯಾಮೆರಾ ಚಲಿಸುತ್ತಿರುವ ವಾಹನಗಳ ನಂಬರ್‌ ಪ್ಲೇಟ್‌ ಅನ್ನು ಗುರುತಿಸುತ್ತದೆ. ಬಳಿಕ ವಾಹನ ಪ್ರಯಾಣಿಸಿದ ದೂರವನ್ನು ಆಧರಿಸಿ ಬ್ಯಾಂಕ್ ಖಾತೆಯಿಂದ ಟೋಲ್ ಮೊತ್ತವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ.

ಜತೆಗೆ ವಿವಿಧ ವಿವರಗಳನ್ನು ಮೇಲ್ವಿಚಾರಣೆ ನಡೆಸಲು ಜಿಪಿಎಸ್ ಅನ್ನು ಬಳಸಲಾಗುತ್ತದೆ. ಒಟ್ಟಿನಲ್ಲಿ ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯು ಜಾರಿಗೆ ಬಂದರೆ ಸಮಯದ ಜತೆಗೆ ಹಣವೂ ಉಳಿತಾಯವಾಗುತ್ತದೆ. ಟೋಲ್‌ ಸಂಗ್ರಹ ಇರುವ ಹೆದ್ದಾರಿಯಲ್ಲಿ ನಾವು ಎಷ್ಟು ದೂರ ಕ್ರಮಿಸಿದ್ದೇವೋ, ಅಷ್ಟಕ್ಕೆ ಮಾತ್ರ ಟೋಲ್‌ ಶುಲ್ಕ ಪಾವತಿಸದರೆ ಸಾಕಾಗುತ್ತದೆ.

ಈ ಹೊಸ ಟೋಲ್ ಸಂಗ್ರಹ ವ್ಯವಸ್ಥೆಯ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ. ಇದು ಸರಾಸರಿ ಕಾಯುವ ಸಮಯವನ್ನು 714 ಸೆಕೆಂಡುಗಳಿಂದ 47 ಸೆಕೆಂಡುಗಳಿಗೆ ಇಳಿಸುತ್ತದೆ. ಅಂತಿಮವಾಗಿ ಪ್ರಯಾಣದ ಸಮಯವನ್ನೂ ಕಡಿಮೆ ಮಾಡುತ್ತದೆ.

ಈ ವಿಧಾನವು ಸಂಚಾರ ದಟ್ಟಣೆಯನ್ನು ಇಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ವಿಶೇಷ ಟೋಲ್ ಲೇನ್‌ಗಳನ್ನು ನಿರ್ಮಿಸುವ ಅಗತ್ಯವಿಲ್ಲ. ಟೋಲ್‌ ಬೂತ್‌ಗಳನ್ನು ತೆಗೆದುಹಾಕುವುದರಿಂದ ಇವುಗಳ ನಿರ್ವಹಣೆ ಮತ್ತು ನಿರ್ಮಾಣ ವೆಚ್ಚಗಳನ್ನು ಉಳಿಸಬಹುದು.

ಬಿಲ್ಲಿಂಗ್ ಪ್ರಕ್ರಿಯೆಯು ಸುಲಭವಾಗುತ್ತದೆ. ಏಕೆಂದರೆ ಬಳಕೆದಾರರು ಅವರು ಪ್ರಯಾಣಿಸುವ ದೂರಕ್ಕೆ ಮಾತ್ರ ಪಾವತಿಸಿದರೆ ಸಾಕು. ಅಂದರೆ ಈಗ ನಾವು ಟೋಲ್‌ ಗೇಟ್‌ ನಂತರ ಅರ್ಧ ಕಿಲೋಮೀಟರ್‌ ಇದ್ದರೂ, ಪೂರ್ತಿ ಹಣವನ್ನು ಪಾವತಿಸಬೇಕು. ಆದರೆ ಸ್ಯಾಟಲೈಟ್‌ ಆಧಾರಿತ ಟೋಲ್‌ ವ್ಯವಸ್ಥೆ ಜಾರಿಗೆ ಬಂದರೆ, ಎಷ್ಟು ದೂರ ಕ್ರಮಿಸಿದ್ದೇವೋ, ಅಷ್ಟಕ್ಕೆ ಮಾತ್ರ ಹಣ ಪಾವತಿ ಮಾಡಬೇಕು.

 

Ad
Ad
Nk Channel Final 21 09 2023
Ad