News Karnataka Kannada
Thursday, May 02 2024
ಸಂಪಾದಕರ ಆಯ್ಕೆ

ಚೆನ್ನೈ: ಮುಖೇಶ್‌ ಅಂಬಾನಿ ಜಗತ್ತಿನ 9ನೇ ಅತಿದೊಡ್ಡ ಶ್ರೀಮಂತ, ಅದಾನಿಗೆ 23ನೇ ಸ್ಥಾನ

Chennai: Mukesh Ambani is the world's 9th richest person, while Adani is ranked 23rd
Photo Credit : IANS

ಚೆನ್ನೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ 82 ಶತಕೋಟಿ ಡಾಲರ್ ಸಂಪತ್ತನ್ನು ಹೊಂದಿರುವ ವಿಶ್ವದ ಅಗ್ರ 10 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮುಂದುವರಿದಿದ್ದಾರೆ. 2023 ಹುರುನ್ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ ದಿಗ್ವಿಜಯ ಯಾತ್ರೆ ಮುಂದುವರಿದಿದ್ದು, ಸತತ ಮೂರನೆ ವರ್ಷ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಆದರೆ ಗೌತಮ್‌ ಅದಾನಿ ಮತ್ತು ಕುಟುಂಬವು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕಳೆದ ವರ್ಷ ಎರಡನೇ ಸ್ಥಾನ ಪಡೆದಿದ್ದು, ಈ ಸಾಲಿನಲ್ಲಿ 23ನೇ ಸ್ಥಾನಕ್ಕೆ ಕುಸಿದಿದೆ. ಜನವರಿಯಲ್ಲಿ ಹಿಂಡೆನ್‌ಬರ್ಗ್‌ನ ವರದಿಯು ಅದಾನಿ ಸಂಪತ್ತು ಇಳಿಕೆಗೆ ಕಾರಣವಾಯಿತು.

ಅಗ್ರ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರು: ವಿಶ್ವದ ಅಗ್ರ 50 ಶ್ರೀಮಂತರಲ್ಲಿ ಸ್ಥಾನ ಪಡೆದಿರುವ ಇತರ ಭಾರತೀಯ ಬಿಲಿಯನೇರ್‌ಗಳೆಂದರೆ ಸೈರಸ್ ಪೂನವಾಲಾ (ಜಾಗತಿಕ ಶ್ರೇಣಿ 46, ಸಂಪತ್ತು $27 ಶತಕೋಟಿ), ಮತ್ತು ಶಿವ ನಾಡರ್ ಮತ್ತು ಕುಟುಂಬ (50, $26 ಬಿಲಿಯನ್) ಅವರು ಇದ್ದಾರೆ. ಪೂನಾವಾಲ ಅವರ ಸಂಪತ್ತು ಶೇಕಡಾ 4 ರಷ್ಟು ಏರಿಕೆಯಾಗಿದೆ. ಚೀನಾ ಮತ್ತು ಯುಎಸ್‌ನಂತಹ ದೇಶಗಳು ಕ್ರಮವಾಗಿ 178 ಮತ್ತು 123 ಬಿಲಿಯನೇರ್‌ಗಳನ್ನು ಹೊಂದಿದ್ದರೆ, ಭಾರತವು 41 ಬಿಲಿಯನೇರ್‌ಗಳನ್ನು ಹೊಂದಿದೆ. ಬಿಲಿಯನೇರ್‌ಗಳ ಸಂಖ್ಯೆಗೆ ಸಂಬಂಧಿಸಿದಂತೆ, ಭಾರತವು ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು