ಇಂದು ಡಿ. 31 ನಾಳೆಯಿಂದ ಹೊಸ ವರ್ಷ ಆರಂಭ. ಪ್ರತಿ ಆಚರಣೆಯನ್ನು ಗೂಗಲ್ ತನ್ನದೇ ಕ್ರಿಯೇಟಿವಿಟಿ ಮೂಲಕ ಸೆಲಿಬ್ರೇಟ್ ಮಾಡುತ್ತೆ. ಈ ಬಾರಿಯೂ ಕೂಡ ಗೂಗಲ್ ಹೊಸ ವರ್ಷವನ್ನು ಸ್ವಾಗತಿಸಲು ಹೊಸ ರೀತಿಯ ಡೂಡಲ್ ಪರಿಚಯಿಸಿದೆ.
ಆನಿಮೇಟೆಡ್ ಡೂಡಲ್ ನಲ್ಲಿ ಬಣ್ಣ ಬಣ್ಣದ ಲೈಟ್ ಗಳು, ಪಾರ್ಟಿ ಟೀಪಿ, ಚಾಕಲೇಟ್ ಮೂಲಕ 2021ಕ್ಕೆ ಗೂಗಲ್ ಬೀಳ್ಕೊಡುಗೆ ನೀಡುತ್ತಿದೆ.
2021 ಕೋವಿಡ್ ಹಾಗೂ ಒಮಿಕ್ರಾನ್ ನ ಆತಂಕದಲ್ಲೇ ಬದುಕಬೇಕಾಗಿತ್ತು. 2022 ಆದರೂ ಸುಂದರ, ಖುಷಿಯ ಬುದುಕಾಗಲಿ ಎಂದು ಎಲ್ಲರೂ ಆಶಿಸುತ್ತಾರೆ. ಅದೇ ರೀತಿ ಗೂಗಲ್ ಕೂಡ ಹೊಸ ವರ್ಷ 2022ರನ್ನು ಸ್ವಾಗತಿಸಲು ಸಜ್ಜಾಗಿದೆ.