ನವದೆಹಲಿ ;ಬಳಕೆದಾರರಿಂದ ಬಂದ 36,934 ದೂರುಗಳ ಆಧಾರದ ಮೇಲೆ 95,680 ತುಣುಕುಗಳನ್ನು ಗೂಗಲ್ನಿಂದ ತೆರವು ಮಾಡಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇಂದು ಗೂಗಲ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಸಿಕ ಪಾರದರ್ಶಕ ವರದಿಯಲ್ಲಿ ಈ ಅಂಕಿ-ಅಂಶ ಬಿಡುಗಡೆ ಮಾಡಲಾಗಿದೆ.
ಇದರ ಜತೆಗೆ ಸ್ವಯಂಚಾಲಿತ ಡಿಲಿಟ್ ವ್ಯವಸ್ಥೆಯಿಂದಾಗಿ ಕಳೆದ ಜುಲೈನಿಂದ ಇದುವರೆಗೂ 5,76,892 ತುಣುಕುಗಳನ್ನು ಗೂಗಲ್ನಿಂದ ತೆಗೆದು ಹಾಕಲಾಗಿದೆಯಂತೆ. ದೇಶದಲ್ಲಿ ಹೊಸ ಐಟಿ ಕಾಯ್ದೆ ಜಾರಿಗೆ ಬಂದ ನಂತರ ಸಾಮಾಜಿಕ ಜಾಲತಾಣಗಳು ತಮ್ಮ ಮಾಸಿಕ ವರದಿಯನ್ನು ಸರ್ಕಾರದೊಂದಿಗೆ ಹಂಚಿಕೆ ಮಾಡಿಕೊಳ್ಳುವುದು ಕಡ್ಡಾಯ. ಈ ನೀತಿ ಜಾರಿಗೆ ಬಂದ ನಂತರ ಗೂಗಲ್ ಸಂಸ್ಥೆ ತನ್ನ ಮಾಸಿಕ ವರದಿಯನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ.
ಭಾರತ ಸರ್ಕಾರದ ನಿಯಮಗಳಿಗೆ ತಲೆಬಾಗಿದ ಗೂಗಲ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.