Showing 20 of 4348 posts • Page 212 of 218
ಕರಾವಳಿಯ ಜನರು ದೈವ ಭಕ್ತರು. ದೈವಗಳ ಆರಾಧನೆ ಅವರ ಮೂಲ ಕರ್ಮ. ಹೆಚ್ಚು ಆರಾಧನೆಗೆ ಒಳಪಡುವ ದೈವವೆಂದರೆ ಅದು ಕೊರಗಜ್ಜ. ಕರಾವಳಿಯಲ್ಲಿ ಕೊರಗಜ್ಜ ಕಾರ್ಣಿಕ ದೈವ.
ಪ್ರತೀ ವರುಷ ಮಂಗಳೂರಿನಲ್ಲಿ ಸುರಿಯುವ ಮಳೆಯಿಂದ ರಾಜಕಾಲುವೆಗಳು ತುಂಬಿ ಹರಿದು ಸುತ್ತಮುತ್ತಲ ತಗ್ಗು ಪ್ರದೇಶದ ಮನೆಮಠ ಅಂಗಡಿ ಮುಂಗಟ್ಟುಗಳಿಗೆ ನೀರು ತುಂಬುತ್ತದೆ.
ಕೆಎಂಸಿ ಆಸ್ಪತ್ರೆ ಅತ್ತಾವರದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವು ಜೂನ್ 13ರಂದು ಯಶಸ್ವಿಯಾಗಿ ಎಚ್.ಪಿ.ವಿ. ಲಸಿಕೆ ಅಭಿಯಾನವನ್ನು ಆಸ್ಪತ್ರೆಯಲ್ಲಿ ಆಯೋಜಿಸಿತು.
ಬೋಳಿಯಾರ್ ಊರಿನ ಜನರು ಪ್ರೀತಿ, ಸೌಹಾರ್ದದಿಂದ ಇದ್ದಾರೆ. ಹೊರಗಿನವರು ಇಲ್ಲಿ ಬಂದು ವಾತಾವರಣ ಕೆಡಿಸಬೇಡಿ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಖ್ಯಾತ ಹಿರಿಯ ಪತ್ರಕರ್ತ ತಾರಾನಾಥ ಗಟ್ಟಿ ಕಾಪಿಕಾಡ್ ಅಧಿಕಾರ ಸ್ವೀಕರಿಸಿದರು. ಜೂನ್ 13, ಗುರುವಾರದಂದು
ಬ್ಯಾಂಕಿನ 2023-24ನೇ ವರ್ಷದ ಸಿಬ್ಬಂದಿ ಕಾರ್ಯಕ್ಷಮತೆ ವಿಶ್ಲೇಷಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ 8, 2024 ರಂದು ಮಂಗಳೂರಿನ ಆಡಳಿತ ಕಚೇರಿಯ ಪಿ.ಎಫ್.ಎಕ್ಸ್ ಸಲ್ಡಾನಾ ಸ್ಮಾರಕ ಸಭಾಂಗಣದಲ್ಲಿ ನಡೆಯಿತು.
ಬಜ್ಪೆಯಲ್ಲಿ ವಾಸ್ತವಿರುವ ಗುಲಾಬಿ ಅಜ್ಜಿ ಮತ್ತು ಮನೆಯ ಸ್ಥಿತಿಗತಿಗಳ ಬಗ್ಗೆ ಜೂನ್ 11 ರಂದು ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿತ್ತು. ಅಜ್ಜಿಯ ಮನೆಗೆ ಭೇಟಿ ನೀಡಿ ಶಾಸಕ ಉಮಾನಾಥ್ ಕೋಟ್ಯಾನ್ ಸ್ಪಂಧಿಸಿದ್ದಾರೆ.
ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಮುಗಿಸಿ ಜನರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಸಿಪಿಐಎಮ್ ಕೇಂದ್ರ ವಿಭಾಗ ಸಮಿತಿಯು ಒತ್ತಾಯಿಸಿದೆ.
ಬಿಜೆಪಿ ವಿಜಯೋತ್ಸವ ವೇಳೆ ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 7 ಆರೋಪಿಗಳನ್ನು ಕೊಣಾಜೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್, ಇರ್ಷಾದ್, ಶರ್ವಾನ್,
ಅನ್ಯಕೋಮಿನ ಇಬ್ಬರು ವಿದ್ಯಾರ್ಥಿಗಳ ಜೊತೆ ಹಿಂದೂ ಯುವತಿ ಸುತ್ತಾಟ ಆರೋಪ ಮಾಡಲಾಗಿದ್ದು, ಕಾರಿನಲ್ಲಿದ್ದ ತಂಡವನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿರುವಂತಹ ಘಟನೆ ಮಂಗಳೂರು ಹೊರವಲಯದ ಮುಕ್ಕ ಎಂಬಲ್ಲಿ ನಡೆದಿದೆ.
ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಇಂದು (ಬುಧವಾರ) ಬೆಳಿಗ್ಗೆ ಕಲ್ಲಡ್ಕಕ್ಕೆ ಭೇಟಿ ನೀಡಿ ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪರಿಶೀಲನೆ ನಡೆಸಿದರು.
ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿದ ಘಟನೆ ನಡೆದಿತ್ತು. ಇರಿತಕ್ಕೆ ಒಳಗಾದ ಇಬ್ಬರು ಕಾರ್ಯಕರ್ತರು ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯುವ ಉರಗಪ್ರೇಮಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ತೇಜಸ್ ಬನ್ನೂರು 25 ಕ್ಕೂ ಮಿಕ್ಕಿದ ಹೆಬ್ಬಾವಿನ ಮರಿಗಳನ್ನು ರಕ್ಷಿಸಿ ಜಿಲ್ಲೆಯ ಬೇರೆ ಬೇರೆ ಅರಣ್ಯಕ್ಕೆ ಬಿಡುವ ಮೂಲಕ ತನ್ನ ಉರಗಪ್ರೇಮವನ್ನು ಮೆರೆದಿದ್ಧಾರೆ.
ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಬಾರ್ತೋಳಿ ಎಂಬಲ್ಲಿ ಕಾಡನೆಗಳನ್ನು ಬಂದ ದಾರಿಗೆ ಅಟ್ಟಿಸುವ ವೇಳೆ ಪಟಾಕಿ ಸಿಡಿದು ದುಂಬಾರೆಯ ಆನೆ ಸಲಹಾ ತರಬೇತಿ ಕೇಂದ್ರದ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಜೂ.11 ರ ಸಂಜೆ ನಡೆದ ಬಗ್ಗೆ ವರದಿಯಾಗಿದೆ.
ಜಿಲ್ಲಾ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖಂಡ, ಪುತ್ತೂರಿನ ಉದ್ಯಮಿ ಪ್ರಕಾಶ್ ಪುರುಷರಕಟ್ಟೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಕಾಶ್ ಅವರು ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
ಕರಾವಳಿ ಮತ್ತು ಉಡುಪಿಯ ಕೆಲವು ಬಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ನಗರದಲ್ಲಿ ಸೋಮವಾರದಿಂದ ಮಳೆ ಆರಂಭವಾಗಿದ್ದು ಭಾರಿ ಮಳೆಯಿಂದಾಗಿ ಕೆಲವು
ಕಂಟೈನರ್ ಲಾರಿಯನ್ನು ಅದರ ಚಾಲಕ ನಿರ್ಲಕ್ಷ್ಯದಿಂದ ಹೆದ್ದಾರಿಯಲ್ಲೇ ನಿಲ್ಲಿಸಿದ ಕಾರಣ ಮಂಗಳವಾರ ಸಂಜೆಯ ವೇಳೆ ಸುರಿಯುತ್ತಿದ್ದ ಮಳೆ ನಡುವೆ ಕೊಲ್ಲೂರಿನಿಂದ ಮಂಗಳೂರಿನತ್ತ ಸಾಗುತ್ತಿದ್ದ
ಬೋಳಿಯಾರುವಿನ ಪ್ರಾರ್ಥನಾ ಮಂದಿರಕ್ಕೆ ಪ್ರಾರ್ಥನೆಗೆ ಬಂದವರ ಕೈಯಲ್ಲಿ ಶಸ್ತ್ರಾಸ್ತ್ರಗಳು ಹೇಗೆ ಬಂದಿದೆ. ಹಾಗಾದರೆ ಇಲ್ಲಿರುವ ಪ್ರಾರ್ಥನಾ ಮಂದಿರಗಳಲ್ಲಿ ಇದೇ ವಸ್ತುಗಳು ಇರೋದಾ?.
ಮಂಗಳೂರಿನ ಹೊರ ವಲಯ ಬೋಳ್ಯಾರ್ನಲ್ಲಿ ಚೂರಿ ಇರಿತ ಪ್ರಕರಣ ಸಂಬಂಧ ಒಟ್ಟು ಆರು ಮಂದಿಯನ್ನು ಬಂಧಿಸಿದ್ದೇವೆ ಹಾಗೂ ಮೂರು ತಂಡ ರಚಿಸಿ ತನಿಖೆ ನಡೆಸುತ್ತಿದ್ದೇವೆ
ಸಮುದ್ರಪಾಲಾಗುತ್ತಿದ್ದ ಮೂವರು ಮಹಿಳೆಯರ ರಕ್ಷಣೆ ಮಾಡಲಾಗಿದ್ದು, ಓರ್ವ ಮಹಿಳೆ ನೀರುಪಾಲಾಗಿರುವ ಘಟನೆ ಮಂಗಳೂರಿನ ಉಳ್ಳಾಲ ಕಡಲತೀರದಲ್ಲಿ ನಡೆದಿದೆ.