ಮಂಗಳೂರು: ಬೆಂಗಳೂರಿನಲ್ಲಿ ಮದುವೆ ನಡೆದ ನಂತರ ಈ ಜೋಡಿ ಮತ್ತೆ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಂಡಿದ್ದಾರೆ. ಸಿಂಡ್ರೆಲಾ ರೀತಿ ಡಿಸೈನರ್ ವೈಟ್ ಗೌನ್‌ನಲ್ಲಿ ಸೋನಲ್ ಮಿಂಚುತ್ತಿದ್ದಾರೆ, ವೈಟ್ ಆಂಡ್ ಬ್ಲಾಕ್ ಸೂಟ್‌ನಲ್ಲಿ ತರುಣ್ ಸುಧೀರ್ ಕಾಣಿಸಿಕೊಂಡಿದ್ದಾರೆ. ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಚರ್ಚ್‌ಗೆ ಭೇಟಿ ನೀಡಿ ಅಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಅದಾದ ಮೇಲೆ ಸಣ್ಣ ರಿಸೆಪ್ಶನ್ ಹಮ್ಮಿಕೊಂಡಿದ್ದರು.

2024 ಆಗಸ್ಟ್​ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಅದ್ಧೂರಿಯಾಗಿ ಕುಟುಂಬಸ್ಥರು, ಗುರು, ಹಿರಿಯರ ಸಮ್ಮುಖದಲ್ಲಿ ಈ ನವ ಜೋಡಿ ಸಪ್ತಪದಿ ತುಳಿದಿತ್ತು. ಬೆನ್ನಲ್ಲೇ ಈ ಬ್ಯೂಟಿಫುಲ್ ಜೋಡಿ ಮತ್ತೊಮ್ಮೆ ವಿವಾಹವಾಗಿದ್ದಾರೆ.

 ಈ ಸೆಲೆಬ್ರೆಷನ್​​ಗೆ ಸೋನಾಲ್ ಅವರ ಸ್ನೇಹಿತರು, ಕುಟುಂಬಸ್ಥರು ಭಾಗಿಯಾಗಿದ್ದರು. ಸೆಲೆಬ್ರೆಷನ್​ನಲ್ಲಿ ನವವಧು ಸೋನಾಲ್ ಗೋಲ್ಡ್​ ಕಲರ್ ಡ್ರೆಸ್ ಧರಿಸಿ ಫಳಫಳ ಅಂತ ಹೊಳೆಯುತ್ತಿದ್ದರು. ಅಲ್ಲದೇ ಫೋಟೋಗೆ ಮಸ್ತ್​ ಮಸ್ತ್​ ಪೋಸ್​ಗಳನ್ನು ಕೊಟ್ಟಿದ್ದರು.