Showing 20 of 4486 posts • Page 184 of 225
ಚಲಿಸುತ್ತಿದ್ದ ಬೈಕ್ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕೆಬ ತಾಲೂಕಿನ ಕೋಡಿಂಬಾಳ ಸಮೀಪದ ಪುಳಿಕುಕ್ಕು ಎಂಬಲ್ಲಿ ನಡೆದಿದೆ.
ಕನ್ನಡ ರಾಜ್ಯೋತ್ಸವದ ಸಂಭ್ರಮ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಗಮನಸೆಳೆದಿದೆ. ಕೆ.ಎಸ್.ಆರ್.ಟಿ.ಸಿ ವಿಭಾಗದ ಬಸ್ಸನ್ನೇ ಕನ್ನಡದ ತೇರಾಗಿ ಪರಿವರ್ತನೆ ಮಾಡಲಾಗಿದೆ.
ಜಾನಪದ ಕ್ರೀಡೆಯಾದ ಕಂಬಳದ ಆರಂಭಗೊಳ್ಳುತ್ತಿದೆ. ಈ ಬಾರಿ ಸಮಯ ಪಾಲನೆಗೆ ಆದ್ಯತೆ ನೀಡಲು ನಿಯಮಾವಳಿ ಸೂತ್ರ ಅನುಷ್ಠಾನಕ್ಕೆ ಜಿಲ್ಲಾ ಕಂಬಳ ಸಮಿತಿ ನಿರ್ಧರಿಸಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಆರಂಭಿಸಿದ ಲೋಕಮಾನ್ಯ ತಿಲಕ್ ಟಿ (ಮುಂಬೈ)-ಕೊಚುವೆಲಿ (ತಿರುವನಂತಪುರ) ಸಾಪ್ತಾಹಿಕ ಸ್ಪೆಷಲ್ (01463) ರೈಲನ್ನು ನ.21ರ ತನಕ ಹಾಗೂ ಕೊಚುವೆಲಿ-ಲೋಕಮಾನ್ಯ ತಿಲಕ್ (ಟಿ) ಸಾಪ್ತಾಹಿಕ ಸ್ಪೆಷಲ್ (01464) ರೈಲನ್ನು ನವೆಂಬರ್ 23 ತನಕ ವಿಸ್ತರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕುರಿಯ ಗ್ರಾಮದ ಇಡಬೆಟ್ಟು ಎಂಬ ಪ್ರದೇಶದಲ್ಲಿ ಮೆಸ್ಕಾಂ ಗುತ್ತಿಗೆದಾರರು ಹಾಕಿದ ಕಂಬ ಎರಡನೇ ದಿನದಲ್ಲಿ ಧರೆಗೆ ಉರುಳಿದೆ.
ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ಯಾ ರೆಹಮತ್ ನಗರ ಕಜೆ ಬಾಕಿಮಾರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ಗಾಂಜಾ ಮಾರಾಟ ನಡೆಸುತ್ತಿದ್ದ ಜೋಡಿಯನ್ನು ಮಂಗಳೂರು ನಗರ ದಕ್ಷಿಣ ಉಪವಿಭಾಗದ ಆಂಟಿ ಡ್ರಗ್ ಟೀಂ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಪೊಳಲಿಯ ಪುರಲ್ದಪ್ಪೆನ ಮೋಕೆದ ಬೊಳ್ಳಿಲು, ಪೊಳಲಿ ಟೈಗರ್ಸ್ ತಂಡದ ವತಿಯಿಂದ ಐದನೇ ವರ್ಷದ ಮೂರು ದಿನಗಳ ದೀಪೋತ್ಸವ ಮತ್ತು ಕುಣಿತ ಭಜನಾ ಕಾರ್ಯಕ್ರಮದ ಮೊದಲ ದಿನದ ಕಾರ್ಯಕ್ರಮ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನೆರವೇರಿತು.
ತಾಯಿ ಸಮುದಾಯವು 42 ಸಾವಿರ ತಾಯಿಯರನ್ನು ಹೊಂದಿರುವ ನೋಂದಾಯಿತ ಟ್ರಸ್ಟ್ ಆಗಿದ್ದು, ದೀಪಾವಳಿ ಪ್ರಯುಕ್ತ ಹಮ್ಮಿಕೊಂಡ ಬೊಳ್ಪುದಾ ಗೌಜಿ- ಸೀಸನ್ 3 ಎಂಬ ಕಾರ್ಯಕ್ರಮವು ಸಂತೋಷ, ಏಕತೆ, ಮತ್ತು ಸಮಾವೇಶವನ್ನು ಸಮುದಾಯದ ಒಳಗಿನಲ್ಲಿ ಹರಡುವ ಉದ್ದೇಶವನ್ನು ಹೊಂದಿತ್ತು.
ಚೇತನಾ ಬಾಲವಿಕಾಸ ಕೇಂದ್ರದ ವಿಶೇಷ ಚೇತನ ಮಕ್ಕಳಿಂದ ದೀಪಾವಳಿಗೆ ಹಣತೆ ತಯಾರಿಸಿದ್ದಾರೆ.
ದೇಶದೆಲ್ಲೆಡೆ ದೀಪಾವಳಿಯ ಸಂಭ್ರಮ ಈ ಸಂಭ್ರಮದ ಪ್ರಯುಕ್ತ ಮಂಗಳೂರು ಶಕ್ತಿ ನಗರದಲ್ಲಿ ಇರುವ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆಯಲ್ಲಿ ದೀಪಾವಳಿ ಹಬ್ಬವನ್ನ ಆಚರಣೆ ಮಾಡಲಾಯಿತ್ತು.
ಕೇಂದ್ರ ಗೃಹ ಸಚಿವ ಅಮಿತ್ ಶಾರವರು ತಂಡಗಳನ್ನು ರಚಿಸಿ 2047ರೊಳಗೆ ಹಿಂದಿಯನ್ನು ರಾಷ್ಟ್ರ ಭಾಷೆ ಮಾಡುವ ಪರಿಕಲ್ಪನೆ ಒಕ್ಕೂಟ ವ್ಯವಸ್ಥೆಯ ಮೇಲಿನ ಹಲ್ಲೆಯಾಗಿದ್ದು, ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಈ ಬಗ್ಗೆ ಜನಜಾಗೃತಿಯಾಗಬೇಕಿದೆ ಎಂದು ಕೆಪಿಸಿಸಿ ವಕ್ತಾರೆ ಯು.ಟಿ. ಫರ್ಜಾನ ಹೇಳಿದ್ದಾರೆ.
ಸ್ಯಾಂಡೀಸ್ ಕಂಪನಿ ಪ್ರಾಯೋಜಕತ್ವದಲ್ಲಿ ಎರಡನೇ ವರ್ಷದ ಮಂಗಳೂರು ಯುವ ದಸರಾ-2024 ಸ್ಟಾರ್ ಮ್ಯೂಸಿಕಲ್ ನೈಟ್ ನ.2ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ದೀಪಾವಳಿ ಸಂಭ್ರಮದೊಂದಿಗೆ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ರೂವಾರಿ, ಶಾಸಕ ಎ.ಉಮಾನಾಥ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ನೇಹಮಿಲನ-ಸಿನಿರಂಗ ಪುರಸ್ಕಾರದಲ್ಲಿ ಹಿರಿಯ ಪತ್ರಕರ್ತ, ರಂಗಚಾವಡಿ ಸಂಸ್ಥೆಯ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ ಅವರನ್ನು “ರಂಗಮಿತ್ರ ಪತ್ರಕರ್ತ” ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಮಂಗಳೂರಿನ ಮೀನುಗಾರಿಕೆ ಬಂದರಿನಲ್ಲಿ ಮೂರನೇ ಹಂತದ ವಿಸ್ತರಣೆಯ ಜೊತೆಗೆ ೧ ಮತ್ತು ೨ ಹಂತದ ಜೆಟ್ಟಿಯನ್ನು ಮೇಲ್ದರ್ಜೆಗೇರಿಸುವ 37.50 ಕೋಟಿ ರೂ. ವೆಚ್ಚದ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.
ಕರ್ನಾಟಕ ಸರ್ಕಾರ ಕೊಡಮಾಡುವ ಜಾನಪದ ಕ್ಷೇತ್ರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ದೈವನರ್ತಕ-ಪಾತ್ರಿ ಲೋಕಯ್ಯಸೇರಾ ಆಯ್ಕೆಯಾಗಿದ್ದಾರೆ.
ಮನೆ ಹಾಗೂ ಅಂಗನವಾಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಹೆಚ್.ಇ. ನಾಗರಾಜ್ ರವರ ನೇತೃತ್ವದ ಅಪರಾದ ತಂಡದ ಸಿಬ್ಬಂದಿಗಳು ಅ.೨೯ರಂದು ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಮಾಣಿ ಜಂಕ್ಷನ್ ನಲ್ಲಿ ಬಂಧಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಘಟಕದ ವತಿಯಿಂದ ನ. 1ರಂದು ಬೆಳಿಗ್ಗೆ 10:30ಕ್ಕೆ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಡಾ. ಶಾಂತಾರಾಮ ಶೆಟ್ಟಿ ಬರೆದ ಕನ್ನಡ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಐಎಂಎ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಂಗಳೂರು ಘಟಕದ ಅಧ್ಯಕ್ಷ ಡಾ. ರಂಜನ್ ಹೇಳಿದ್ದಾರೆ.
ಹಿಂದೂ ಸಂಸ್ಕೃತಿ, ಸಂಸ್ಕಾರ, ಪರಂಪರೆಗಳ ಮೇಲೆ ದಾಳಿಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ನಮ್ಮತನವನ್ನು ಉಳಿಸಿಕೊಳ್ಳುವುದಕ್ಕೆ ಹೋರಾಡಬೇಕಾದ ಸ್ಥಿತಿಯಲ್ಲಿದ್ದೇವೆ.
ಮೂಲತಃ ಉಡುಪಿ- ಮಂಗಳೂರಿನವರಾದ ಶ್ರೀ ಕಿಶೋರ ಶೆಟ್ಟಿಯವರು ಕಳೆದ ಕೆಲವು ವರ್ಷಗಳಿಂದ ಯುಎಇಯಲ್ಲಿ ನೆಲೆಸಿದ್ದಾರೆ.
ಭಾರತೀಯ ಜೀವ ವಿಮಾ ನಿಗಮ ಬದುಕಿಗೆ ಭದ್ರತೆ ಒದಗಿಸುವ ಕಾರ್ಯ ಮಾಡುತ್ತದೆ.