ಮಂಗಳೂರು: ಮಂಗಳೂರಿನಲ್ಲಿ ಸ್ವಾತಂತ್ರ್ಯೋ ತ್ಸವ ಸಂದರ್ಭದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮೇಲೆ ಛೋಟಾ ಫ್ಯಾನ್ಸ್ ಮುಗಿಬಿದ್ದ ಘಟನೆ ನಡೆದಿದೆ. ಫ್ಯಾನ್ಸ್ ಅಭಿಮಾನ ಕಂಡು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಫಿದಾ ಆಗಿದ್ದಾರೆ.
Screenshot 2024 08 15 151944

ತಮ್ಮ ನೆಚ್ಚಿನ ಜಿಲ್ಲಾಧಿಕಾರಿಗಯೊಂದಿಗೆ ಸೆಲ್ಫಿಗಾಗಿ ಪುಟಾಣಿಗಳು ಮುಗಿ ಬಿದ್ದಿದ್ದಾರೆ. ರಜೆ ಕೊಡುವ ಡಿಸಿ ಎಂದೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಖ್ಯಾತಿ ಪಡೆದಿದ್ದಾರೆ. ಈ ಬಾರಿ ಭಾರೀ ಮಳೆ ಹಿನ್ನಲೆ ಶಾಲೆಗಳಿಗೆ ಜಿಲ್ಲಾಡಳಿತ ಸಾಲು ಸಾಲು ರಜೆ ಘೋಷಿಸಿತ್ತು. ಹೀಗಾಗಿ ಡಿಸಿ ಕಾಳಜಿಗೆ ಪುಟಾಣಿಗಳು ಫಿದಾ ಆಗಿದ್ದಾರೆ. ಪುಟಾಣಿ ಮಕ್ಕಳಿಗೆ ದ. ಕ ಡಿಸಿ ಎಂದರೆ ಅಚ್ಚು ಮೆಚ್ಚು. ಎಲ್ಲೆ ಹೋದರು ಜಿಲ್ಲಾಧಿಕಾರಿಯವರಿಗೆ ಮಕ್ಕಳು ಮುತ್ತಿಕೊಳ್ಳುತ್ತಾರೆ. ಶೇಕ್ ಹ್ಯಾಂಡ್ ನೀಡಿ ಪುಟಾಣಿಗಳು ಥ್ಯಾಂಕ್ಸ್ ಹೇಳಿದ್ದಾರೆ.
Screenshot 2024 08 15 151935

ಇನ್ನು ಇಂದು ಪುರಭವನದಲ್ಲಿ ನಡೆದ ಸ್ವಾತಂತ್ರ್ಯೋ ತ್ಸವ ಸಂದರ್ಭ ಸೆಲ್ಫಿ ಹಾಗೂ ಶೇಕ್ ಹ್ಯಾಂಡ್ ನೀಡಿ ಡಿಸಿ ಮುಲ್ಲೈ ಮುಗಿಲನ್ ಮಕ್ಕಳನ್ನ ಖುಷಿ ಪಡಿಸಿದ್ದಾರೆ.