ಮೂಡಬಿದಿರೆ: ಕಡಂದಲೆ ನದಿಯಲ್ಲಿ ಎರಡು ಗೋವುಗಳ ತಲೆಗಳು ಪತ್ತೆ ಆಗಿದೆ. ದನವನ್ನು ಕೊಂದ ಬಳಿಕ ಅದರ ತಲೆಗಳನ್ನು ನದಿಗೆ ತಂದು ಹಾಕಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆಕಡಂದಲೆಯ ನದಿಯ ತೀರದಲ್ಲಿ ದನದ ತಲೆಗಳನ್ನು ಜನ ಪತ್ತೆ ಮಾಡಿದ್ದಾರೆ. ಈ ಪರಿಸರದಲ್ಲಿ ಅಕ್ರಮ ಕಸಾಯಿ ಖಾನೆ ಇದೆಯೇ ಎಂಬ ಪ್ರಶ್ನೆ ಈಗ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣ ಆಗಿದೆ. ದನ ಹಾಗೂ ಕರುವನ್ನು ಹತ್ಯೆ ಮಾಡಿ ಬಳಿಕ ಅದರ ತಲೆಗಳನ್ನು ಈ ನದಿಗೆ ಹಾಕಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ದನಗಳ ಮಾರಣ ಹೋಮ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ