Showing 20 of 4480 posts • Page 136 of 224
ಮಳೆಗಾಲದಲ್ಲಿ ಕಡಲು ಪ್ರಕ್ಷುಬ್ಧಗೊಳ್ಳುವ ಕಾರಣ ಜೂ. 1ರಿಂದ ಜು. 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿದೆ. ಈ ಹಿನ್ನಲೆ ಯಾಂತ್ರೀಕೃತ ಮೀನುಗಾರಿಕೆ ರಜೆ ಇಂದಿನಿಂದ ಆರಂಭವಾಗಲಿದೆ.
ದ.ಕ.ಜಿಲ್ಲೆಯಲ್ಲಿ ಮತ್ತೆ ಮತ್ತೆ ಅಹಿತಕರ ಘಟನೆಗಳು ನಡೆಯಲು ಕೋಮುವಾದಿಗಳ ದ್ವೇಷ ಭಾಷಣವೇ ಪ್ರಮುಖ ಕಾರಣವಾಗಿದೆ. ಆರಂಭದಲ್ಲೇ ದ್ವೇಷ ಭಾಷಣಕಾರರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರೆ ಅಮಾಯಕರ ಕೊಲೆಯಾಗುತ್ತಿರಲಿಲ್ಲ.
ರಾಜ್ಯದ ಸರಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಗಮನಹರಿಸುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಹೇಳಿದರು.
ಪ್ರಚೋದನಕಾರಿ ಭಾಷಣ ಮಾಡೋರನ್ನ ಕೆಲ ಸಂಘಟನೆಗಳು ರಕ್ಷಣೆ ಮಾಡುತ್ತಿದೆ. ಅವರಿಗೆ ಲಾಯಾರ್ಸ್ ಕೊಡ್ತಾರೆ, ಜಡ್ಜಸ್ ಹತ್ತಿರ ಮಾತನಾಡಿಸ್ತಾರೆ.
ಮಳೆರಾಯನ ಆರ್ಭಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಬಲಿಯಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಲಾಯಿತು.
ಸರ್ಕ್ಯೂಟ್ ಹೌಸ್ ನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸಾರ್ವಜನಿಕ ಭೇಟಿ ವೇಳೆ ದ.ಕ ಜಿಲ್ಲೆಯ ಮುಸ್ಲಿಂ ಕಾಂಗ್ರೆಸ್ ಮುಖಂಡರು ಅಂತರ ಕಾಯ್ದುಕೊಂಡಿದ್ದಾರೆ. ಗುಂಡೂರಾವ್ ಭೇಟಿಗೂ ಜಿಲ್ಲೆಯ ಮುಸ್ಲಿಂ ಮುಖಂಡರು ಆಗಮಿಸಲಿಲ್ಲ.
ಪ್ರಚೋದನಕಾರಿ ಭಾಷಣಗಳ ಬಗ್ಗೆ ಸಚಿವ ಗುಂಡೂರಾವ್ ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ನಡೆಯುತ್ತಿರುವ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಕಾಂಗ್ರೆಸ್ ಮುಖಂಡ ಗರಂ ಆಗಿದ್ದಾರೆ.
ಅಬ್ದುಲ್ ರಹಿಮಾನ್ ಹತ್ಯೆ ಖಂಡಿಸಿ ಇಂದು ಸಂಜೆ 3 ಗಂಟೆಗೆ ಕ್ಲಾಕ್ ಟವರ್ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.
ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಾಹುತ ಆದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿಗೆ ದೌಡಾಯಿಸಿ ಬಂದಿದ್ದು ವಿಪತ್ತು ಸಂಭವಿಸಿದ ಮಂಜನಾಡಿ ಮತ್ತು ಕೊಣಾಜೆ ಬಳಿಯ ಬೆಳ್ಳ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ಕರ್ನಾಟಕದಲ್ಲಿ ಸೂಪರ್ ಕಾಪ್, ಆಂಧ್ರ ಪ್ರದೇಶದಲ್ಲಿ ಸಿಂಗಂ ಎಂದು ಬಿರುದು ಪಡೆದಿರುವ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಕೋಮು ದ್ವೇಷದ ದಳ್ಳುರಿಗೆ ತುತ್ತಾಗಿರುವ ಮಂಗಳೂರಿಗೆ ಆಗಮಿಸಿದ್ದಾರೆ.
ಬಂಟ್ವಾಳದಲ್ಲಿ ನಡೆದ ಹತ್ಯೆ ಬಳಿಕ ಸೆಕ್ಷನ್ ಹಾಕಲಾಗಿದ್ದು, ಯಾವುದೇ ಸಭೆ ಸಮಾರಂಭ ನಡೆಸುವ ಹಾಗೆ ಇಲ್ಲ. ಆದರೆ ಕಾಂಗ್ರೇಸ್ ನ ಅಲ್ಪಸಂಖ್ಯಾತ ಮುಖಂಡರು ಸಭೆ ಸೇರಲು ಅವಕಾಶ ಕೊಟ್ಟಿದ್ದಾರೆ.
ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ಎಂಬಾತ ಲೋಕಾಯುಕ್ತ ಕಚೇರಿಗೆ ಬಂದು ಲೋಕಾಯಕ್ತ ಪೊಲೀಸ್ ನಿರೀಕ್ಷಕರಿಗೆ ನನ್ನ ಮೇಲೆ ಯಾವುದೇ ರೀತಿ ದಾಳಿ
ಭಾರೀ ಮಳೆಗೆ ವಿದ್ಯುತ್ ಶಾಕ್ ಹೊಡೆದು ಪವರ್ ಮ್ಯಾನ್ ಬಲಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಓಡಿನ್ಮಾಳ ಗ್ರಾಮದ ಕುಮ್ಮಂಜ ಎಂಬಲ್ಲಿ ನಡೆದಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದನೇ ಬಲಿಯಾಗಿದೆ.
ಕರಾವಳಿಯಲ್ಲಿ ಮಳೆಯಿಂದ ವ್ಯಾಪಕ ನಾಶ ನಷ್ಟ ಉಂಟಾಗಿದೆ, ಸರಕಾರ ಕೂಡಲೇ ಇದಕ್ಕೆ ಪರಿಹಾರ ನೀಡಬೇಕೆಂದು , ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಳ ಆಗ್ರಹಿಸಿದರು.
ಮಂಗಳೂರು ಹೊರವಲಯದ ವಾಮಂಜೂರಿನ ಕೆತ್ತಿಕಲ್ ನಲ್ಲಿ ಗುಡ್ಡ ಕುಸಿತದ ಭೀತಿ ಉಂಟಾಗಿದೆ. ಮಂಗಳೂರು-ಮೂಡಿಬಿದ್ರಿ ರಾಷ್ಟ್ರೀಯ ಹೆದ್ದಾರಿ – 169 ರಲ್ಲಿ ಸಂಚಾರಕ್ಕೆ ಅಪಾಯ ಸಾಧ್ಯತೆ ಇದೆ.
ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡರೆ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಮನೆಯಲ್ಲಿ ಹಿರಿಯರನ್ನು ಪ್ರೀತಿ ಮತ್ತು ಗೌರವದಿಂದ ನೋಡುವುದು ಹಾಗೂ ಅವರ ಜೀವನದ ಕೊನೆತನಕ ಆಸರೆಯಾಗಿ ನಿಲ್ಲುವುದು ಉತ್ತಮ ಸಂಸ್ಕಾರ
ಕಳೆದ 44 ವರ್ಷಗಳಿಂದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಸೇವೆಯಲ್ಲಿ ತೊಡಗಿರುವ ಮಂಗಳೂರಿನ ಕೊಂಕಣಿ ಸಾಂಸ್ಕೃತಿಕ ಸಂಘದ ವತಿಯಿಂದ ಕೊಂಕಣಿ ಯಕ್ಷಗಾನ “ದಮಯಂತಿ ಪುನಃ ಸ್ವಯಂವರ” ಪ್ರಸಂಗದ ಪ್ರದರ್ಶನ
ಮೊಂಟೆಪದವು ಹಿತ್ತಿಲುಕೋಡಿ ಕೊಪ್ಪಲದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಹಿರಿಯ ನಾಗಸ್ವರ ವಾದಕ ಸೈಯದ್ ನಾಸಿರ್ ಎರ್ಮಾಳ್ ಅವರಿಗೆ ಚಾವಡಿ ತಮ್ಮನದ ಗೌರವ ಸಮರ್ಪಣೆಯ ಕಾರ್ಯಕ್ರಮ
ರಸ್ತೆಯಲ್ಲಿ ನಿಲ್ಲಿಸಿದ್ದ ಮಣ್ಣು ಸಾಗಾಟದ ಲಾರಿಯೊಂದರ ಹಿಂಬಾಗಕ್ಕೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಸವಾರರಿಬ್ಬರ ಪೈಕಿ ಓರ್ವ ಮೃತ್ಯು