ಮಂಗಳೂರು: ಕರ್ನಾಟಕದ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತದ ಡ್ರಗ್ಸ್ ಸೀಜ್ ಮಾಡಿದ ಘಟನೆ ನಡೆದಿದ್ದು, ಈ ವಿಚಾರವಾಗಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರಾವಾಲ್ ಸುದ್ದಿಗೋಷ್ಟಿ ನಡೆಸಿದ್ದಾರೆ.

ಆರು ತಿಂಗಳ ಹಿಂದೆ ಹೈದರ್ ಆಲಿ ಎಂಬಾತನನ್ನು ನಾವು ಪಂಪ್ ವೆಲ್ ನಲ್ಲಿ ವಶಕ್ಕೆ ಪಡೆದಿದ್ದೆವು. ಆತನಿಂದ 15 ಗ್ರಾಂ ಎಂಡಿಎಂಎ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದೆವು, ಮಂಗಳೂರು ಸಿಸಿಬಿ ಪೊಲೀಸರು ಆತನ ವಿಚಾರಣೆ ನಡೆಸಿದಾಗ ನೈಜೀರಿಯಾ ಪ್ರಜೆಯ ಮಾಹಿತಿ ಸಿಕ್ಕಿತ್ತು.

ಈ ಕಾರ್ಯಾಚರಣೆ ನಡೆಸಿ ಪೀಠರ್ ಎಂಬ ನೈಜಿರಿಯಾ ಪ್ರಜೆಯನ್ನ ಆರು ಕೋಟಿ ಎಂಡಿಎಂಎ ಜೊತೆ ಬೆಂಗಳೂರಿನಲ್ಲಿ ವಶಕ್ಕೆ ಪಡೆದೆವು, ಈ ಪ್ರಕರಣದ ಬಳಿಕ ಪೀಠರ್ ತನಿಖೆ ನಡೆಸಿ ಕಿಂಗ್ ಪಿನ್ ಪತ್ತೆಗೆ ಇಳಿದೆವು, ಇದರ ಮೂಲ ಪತ್ತೆಗೆ ಇಳಿಯಲು ಆರು ತಿಂಗಳಿನಿಂದ ಕಾರ್ಯಾಚರಣೆ ನಡೆಸ್ತಾ ಇದೀವಿ. ಒಂದು ಮಾಹಿತಿ ಪ್ರಕಾರ ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ವಿದೇಶಿ ಮಹಿಳಾ ಪ್ರಜೆಗಳು ಡ್ರಗ್ ಸಾಗಿಸೋ ಮಾಹಿತಿ ಸಿಕ್ಕಿತ್ತು.

ಅದರ ಆಳ ಪತ್ತೆಗೆ ಇಳಿದಾಗ ಮಾ.14ರಂದು ದೆಹಲಿಯಿಂದ ಬೆಂಗಳೂರಿಗೆ ಆ ಮಹಿಳೆಯರು ಬರೋ ಮಾಹಿತಿ ಸಿಕ್ಕಿತ್ತು. ಅದರಂತೆ ಅವರು ಬೆಂಗಳೂರು ಏರ್ಪೋರ್ಟ್ ಇಳಿದ ತಕ್ಷಣ ಮಂಗಳೂರು ಸಿಸಿಬಿ ಅರೆಸ್ಡ್ ಮಾಡಿದೆ. ಸದ್ಯ ಸೌತ್ ಆಫ್ರಿಕಾ ಮೂಲದ ಬಾಂಬಾ ಫಾಂಟ(31) ಹಾಗೂ ಅಬಿಗೈಲ್ ಅಡೋನಿಸ್(30) ಬಂಧಿಸಲಾಗಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ಬಂಧಿಸಲಾಗಿದ್ದು, ಟ್ರಾಲಿ ಟ್ರಾವೆಲ್ ಬ್ಯಾಗ್ ನಲ್ಲಿ ಎಂಡಿಎಂಎ ಡ್ರಗ್ ಇತ್ತು. 75 ಕೋಟಿ ಮೌಲ್ಯದ 37.878 ಕೆ.ಜಿ ಮೌಲ್ಯದ ಎಂಡಿಎಂಎ ಸೀಝ್ ಮಾಡಲಾಗಿದೆ. ನಾಲ್ಕು ಮೊಬೈಲ್ ಫೋನ್ ಗಳು, ಪಾಸ್‌ಪೋರ್ಟ್, 18 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ಹಾಗೂ ಇತರೆ ಭಾಗದ ನೈಜೀರಿಯನ್ ಪೆಡ್ಲರ್ ಗಳಿಗೆ ಸಾಗಾಟ ಮಾ ಡಲಾಗಿದೆ. ನಕಲಿ ಪಾಸ್ ಪೋರ್ಟ್ ಹಾಗೂ ನಕಲಿ ವೀಸಾ ಬಳಸಿ ಪ್ರಯಾಣ ನಡೆಸುತ್ತಿದ್ದರು ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.