ಮಂಗಳೂರು: ಆಕಸ್ಮಿಕವಾಗಿ ಹಾರಿದ ಗುಂಡು ವ್ಯಕ್ತಿ ಗಂಭೀರ ಗಾಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಮಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬೃಹತ್ ಅಕ್ರಮ ಪಿಸ್ತೂಲ್ ಮಾರಾಟ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಕೇರಳ ಮೂಲದ ನಟೋರಿಯಸ್ ವೆಪೆನ್ ಡೀಲರ್ ಸೇರಿದಂತೆ ಐವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕೇರಳದ ಮೂಲದ ಖತರ್ನಾಕ್ ಕ್ರಿಮಿನಲ್ ಗಳಾದ ಅಬ್ದುಲ್ ಲತೀಫ್ ,ಮನ್ಸೂರು , ನೌಫಾಲ್,ಮಹಮ್ಮದ್ ಅಸ್ಗರ್ ,ಮಹಮ್ಮದ್ ಸಾಲಿ ಇವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಮೂರು ಪಿಸ್ತೂಲ್ ಹಾಗು ಗುಂಡುಗಳ ವಶ ಪಡಿಸಲಾಗಿದೆ. ಮುಂಬಯಿ ಯಿಂದ ಬೃಹತ್ ಅಕ್ರಮ ಪಿಸ್ತೂಲ್ ಸರಬರಾಜು ಜಾಲ ನಡೆಯುತ್ತಿದೆ. ಸಮಾಜ ಘಾತಕ ಶಕ್ತಿಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಲಾಗುತ್ತಿದೆ.

