Bengaluru 29°C
Ad

ಯಕ್ಷಗಾನ ಬಡಗು ತಿಟ್ಟಿನ ಹಿರಿಯ ಕಲಾವಿದರಾದ ಪೇತ್ರಿ ಮಾಧವ್ ನಾಯ್ಕ್ ನಿಧನ

Nomore

ಬ್ರಹ್ಮಾವರ: ಯಕ್ಷಗಾನ ಬಡಗು ತಿಟ್ಟಿನ ಹಿರಿಯ ಕಲಾವಿದರಾದ ಪೇತ್ರಿ ಮಾಧವ್ ನಾಯ್ಕ್ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

Ad
300x250 2

ಬ್ರಹ್ಮಾವರ ತಾ| ಪೇತ್ರಿ ಸಮೀಪದ ಹಲುವಳ್ಳಿಯ ವಾಮನ ನಾಯ್ಕ್-ಮೈದಾ ಬಾಯಿ ದಂಪತಿಗಳ ಪುತ್ರನಾಗಿ 1940ರಲ್ಲಿ ಜನಿಸಿದ ಮಾಧವ ನಾಯ್ಕ ಅವರಿಗೆ ಯಕ್ಷಗಾನದ ಮದ್ದಳೆಯ ಕ್ರಾಂತಿಕಾರ, ಸೋದರ ಮಾವ ತಿಮ್ಮಪ್ಪ ನಾಯ್ಕರು ಮೊದಲ ಗುರು.

ದಿಗ್ಗಜ ಗುರು ತಿಮ್ಮಪ್ಪ ನಾಯ್ಕರ ಮಾರ್ಗದರ್ಶನದಲ್ಲಿ ಯಕ್ಷರಂಗಕ್ಕೆ ಕಾಲಿಟ್ಟ ಮಾಧವ ನಾಯ್ಕರು ಎಲ್ಲರಿಗೂ ಪ್ರೀತಿಯ ನೆಚ್ಚಿನ ಕಲಾವಿದರಾಗಿದ್ದು ಹಳೆಯ ಅನುಭವಗಳ ಆಗರವಾಗಿದ್ದರು. ಯಕ್ಷಗಾನದ ಹೆಜ್ಜೆಗಾರಿಕೆ ಅಭ್ಯಾಸ ಮಾಡಿದ ಬಳಿಕ ಆ ಕಾಲದ ಪ್ರಸಿದ್ಧ ಕಲಾವಿದರಾದ ಭಾಗವತ ತೆಂಗಿನಜೆಡ್ಡು ರಾಮಚಂದ್ರ ರಾಯರು, ಗೋರ್ಪಾಡಿ ವಿಟ್ಠಲ ಪಾಟೀಲರು ಇನ್ನಷ್ಟು ಮಾರ್ಗದರ್ಶನ ನೀಡಿದರು.

14ನೇ ವಯಸ್ಸಿನಲ್ಲೆ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿ ಸಾಲಿಗ್ರಾಮ, ಪೆರ್ಡೂರು, ಮೂಲ್ಕಿ, ಅಮೃತೇಶ್ವರಿ ಮೇಳಗಳಲ್ಲಿ 30 ವರ್ಷಗಳ ಕಾಲ ವಿವಿಧ ಪಾತ್ರಗಳಲ್ಲಿ ರಂಜಿಸಿ ಅರ್ಥಪೂರ್ಣ ಕಲಾ ಸೇವೆ ಮಾಡಿದ್ದರು.

ಉಡುಪಿಯ ಯಕ್ಷಗಾನ ಕೇಂದ್ರದ ಮೂಲಕ ಯಕ್ಷರಂಗದ ತಿರುಗಾಟ ನೆಡೆಸಿದರು. ಡಾ| ಶಿವರಾಮ ಕಾರಂತರ ಮೆಚ್ಚುಗೆ ಪಡೆದು ಅವರ ತಂಡಕ್ಕೆ ಆಯ್ಕೆಯಾಗುವ ಮೂಲಕ ದುಬೈ, ಕೆನಡಾ , ಜಪಾನ್, ರಷ್ಯ, ಇಟಲಿ ಸೇರಿ ಹಲವು ಯುರೋಪ್ ದೇಶಗಳಿಗೆ ತೆರಳಿ ಅಲ್ಲಿನ ಜನರನ್ನು ಬೆರಗು ಮೂಡಿಸಿದ್ದರು.

Ad
Ad
Nk Channel Final 21 09 2023
Ad