Bengaluru 24°C
Ad

ಆಸ್ತಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಉದ್ಯಮಿ ವಿಜಯ ಸಂಕೇಶ್ವರ್ ಪುತ್ರಿ

Deepa

ಬೆಳಗಾವಿ: ಆಸ್ತಿಗಾಗಿ ಮಾಟ ಮಂತ್ರ ಮಾಡಿದ್ದಾರೆ ಎಂದು ಆರೋಪಿಸಿ ಖ್ಯಾತ ಉದ್ಯಮಿ ಡಾ.ವಿಜಯ ಸಂಕೇಶ್ವರ ಪುತ್ರಿ, ಮಾಜಿ ಸಂಸದ ಎಸ್‌.ಬಿ ಸಿದ್ನಾಳರ ಕಿರಿಯ ಸೊಸೆ ದೀಪಾ ಸಿದ್ನಾಳ ಅವರು ಕಾನೂನು ಸಮರ ಸಾರಿದ್ದಾರೆ.

Ad
300x250 2

ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೀಪಾ ಸಿದ್ನಾಳ ಅವರು BNS 1860, ಸೆಕ್ಷನ್ 120ಬಿ, 506, 307, ಮಾಟ ಮಂತ್ರ ಕಾಯ್ದೆ 2007 ಅಡಿಯಲ್ಲಿ ದೂರು ಕೂಡ ದಾಖಲಿಸಿದ್ದಾರೆ.

ಬೆಳಗಾವಿ ಮಾಜಿ ಸಂಸದರ ಕೌಟುಂಬಿಕ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಉದ್ಯಮಿ ಡಾ.ವಿಜಯ ಸಂಕೇಶ್ವರ ಪುತ್ರಿ ದೀಪಾ ಸಿದ್ನಾಳ ಅವರು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಿಜಯಕಾಂತ ಹಾಲಿನ ಡೇರಿ ಕಬಳಿಸಲು ಹುನ್ನಾರ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.

ವಿಜಯ ಸಂಕೇಶ್ವರ್ ಪುತ್ರಿ ದೀಪಾ ಸಿದ್ನಾಳ ಅವರು ಮಾಜಿ ಸಂಸದ ಎಸ್‌.ಬಿ ಸಿದ್ನಾಳರ ಕಿರಿಯ ಮಗ ಶಿವಕಾಂತ ಸಿದ್ನಾಳ ಅವರನ್ನು ಮದುವೆ ಆಗಿದ್ದರು. ಇತ್ತೀಚಿಗೆ ಶಿವಕಾಂತ್ ಸಿದ್ನಾಳ್‌ ಸಾವನ್ನಪ್ಪಿದ್ದಾರೆ. ನನ್ನ ಪತಿ ಸಾವಿಗೂ ಮಾಟ, ಮಂತ್ರ ಕಾರಣವಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದು, ಅವರ ಸಮಾಧಿ ಸುತ್ತಮುತ್ತ ಮಾಟಮಂತ್ರ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ವಿಜಯಕಾಂತ ಡೇರಿ ಹಾಗೂ ಅದರ ಸ್ವತ್ತುಗಳನ್ನು ಕಬಳಿಸಲು ಮೃತ ಶಿವಕಾಂತ್​ರ ಸೋದರ ಶಶಿಕಾಂತ್ ಅವರು ಹುನ್ನಾರ ಮಾಡಿದ್ದಾರೆ ಎಂದು ಶಶಿಕಾಂತ್ ಸಿದ್ನಾಳ್, ಪತ್ನಿ ವಾಣಿ, ಪುತ್ರ ದಿಗ್ವಿಜಯ್ ವಿರುದ್ಧ ದೀಪಾ ಸಿದ್ನಾಳ್ ಅವರು FIR ದಾಖಲು ಮಾಡಿದ್ದಾರೆ.

Ad
Ad
Nk Channel Final 21 09 2023
Ad