Ad

ಭಾರತದ ರಸ್ತೆಗಿಳಿದ ಹೊಸ ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್

Scooty

ಜನಪ್ರಿಯ ಇಟಾಲಿಯನ್​ ವಾಹನ ತಯಾರಕ ಪಿಯಾಜಿಯೊ ಕಂಪನಿಯ ವೆಸ್ಪಾ ಸ್ಕೂಟರ್​ ಬಗ್ಗೆ ಬಹುತೇಕರೀಗೆ ತಿಳಿಸಿದೆ. ಆದರೀಗ ಈ ಕಂಪನಿ ಭಾರತದಲ್ಲಿ ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್​ ಅನ್ನು ಪರಿಚಯಿಸಿದೆ. ಅಚ್ಚರಿ ಎಂದರೆ ಈ ಸ್ಕೂಟರ್​ ಬೆಲೆ ಕೇಳಿದ್ರೆ ಹೊಸ ಕಾರು ಖರೀದಿಸಬಹುದಾಗಿದೆ.

Ad
300x250 2

ವೆಸ್ಪಾ 946 ಡ್ರ್ಯಾಗನ್ ಸೀಮಿತ ಆವೃತ್ತಿಯ ಸ್ಕೂಟರ್​ ಭಾರತದಲ್ಲಿ ಬಿಡುಗಡೆಗೊಂಡಿದೆ. ಭಾರತೀಯ ವಾಹನ ಪ್ರಿಯರಿಗಾಗಿ ಪರಿಚಯಿಸಿದ ಈ ಸ್ಕೂಟರ್​ ಬೆಲೆ ಬರೋಬ್ಬರಿ 14.28 ಲಕ್ಷ ರೂಪಾಯಿಯಾಗಿದೆ. ಮೋಟೋಪ್ಲೆಕ್ಸ್​ ಶೋರೂಂಗಳಲ್ಲಿ ಈ ನೂತನ ಸ್ಕೂಟರನ್ನು ಬುಕ್​ ಮಾಡಿ ಖರೀದಿಸಬಹುದಾಗಿದೆ.

ಹೊಸ ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್​ 150cc ait-ಕೂಲ್ಡ್ ಎಂಜಿನ್ ಹೊಂದಿದ್ದು, ನಾಲ್ಕು ವಾಲ್ವ್‌ಗಳನ್ನು ಹೊಂದಿದೆ. ಈ ಎಂಜಿನ್ ಸಂರಚನೆಯು 10.3Nm ಟಾರ್ಕ್ ಜೊತೆಗೆ 11.1bhp ನ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.

ಇಂತಹ ಸ್ಕೂಟರ್‌ಗಳನ್ನು ವಿಶೇಷ ಆವೃತ್ತಿಗಳಂತೆ ಆಗಾಗ್ಗೆ ಬಿಡುಗಡೆ ಮಾಡುತ್ತದೆ. ಈ ಸ್ಕೂಟರ್‌ಗಳಿಗೆ ವಿಶ್ವದಾದ್ಯಂತ ಬೇಡಿಕೆಯಿದ್ದು, ಇವನ್ನು ಓಡಿಸಲು ಯಾರೂ ಕೂಡ ಖರೀದಿಸುವುದಿಲ್ಲ, ಬದಲಾಗಿ ಇದನ್ನು ಸಂಗ್ರಹಣೆಗಾಗಿ ಖರೀದಿಸುತ್ತಾರೆ.

12-ಇಂಚಿನ ಚಕ್ರಗಳನ್ನು ಹೊಂದಿರುವ ವೆಸ್ಪಾ ನೂತನ ಸ್ಕೂಟರ್​, 220mm ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್-ಚಾನೆಲ್ ABS ನೀಡಲಾಗಿದೆ. ಜೊತೆಗೆ ಸ್ಕೂಟರ್​ನಲ್ಲಿ ಎಲ್ಇಡಿ ದೀಪ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಳೆತ ನಿಯಂತ್ರಣದಂತಹ ಆಧುನಿಕ ವೈಶಿಷ್ಟ್ಯಗಳನ್ನು ನೀಡಲಾಗಿದೆ.

Ad
Ad
Nk Channel Final 21 09 2023
Ad