Bengaluru 22°C
Ad

ರಾಡ್ ಹಿಡಿದುಕೊಂಡು ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯ ರಕ್ಷಣೆ: ತಪ್ಪಿದ ಸಂಭಾವ್ಯ ಅನಾಹುತ

ಪೆರ್ಡೂರಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ದಿನಗಳಿಂದ ಕಬ್ಬಿಣದ ರಾಡ್ ಹಿಡಿದು ತಿರುಗಾಡುತ್ತಾ ಆತಂಕ ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ಸಮಾಜಸೇವಕ ವಿಶು ಶೆಟ್ಟಿಯವರ ಸಹಾಯದಿಂದ ವಶಕ್ಕೆ ಪಡೆದು, ಬಳಿಕ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು.

ಉಡುಪಿ: ಪೆರ್ಡೂರಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ದಿನಗಳಿಂದ ಕಬ್ಬಿಣದ ರಾಡ್ ಹಿಡಿದು ತಿರುಗಾಡುತ್ತಾ ಆತಂಕ ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ಸಮಾಜಸೇವಕ ವಿಶು ಶೆಟ್ಟಿಯವರ ಸಹಾಯದಿಂದ ವಶಕ್ಕೆ ಪಡೆದು, ಬಳಿಕ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು.

Ad
300x250 2

ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ನಂದ (48) ಎಂದು ಗುರುತಿಸಲಾಗಿದೆ. ತುಳು ಭಾಷೆ ಮಾತನಾಡುತ್ತಿದ್ದು, ಕಳೆದ ಕೆಲವು ದಿನಗಳಿಂದ ಪೆರ್ಡೂರಿನ ದೂಪದಕಟ್ಟೆ ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ಹಗಲು ತಿರುಗಾಡುತ್ತಾ ಒಮ್ಮೊಮ್ಮೆ ಉದ್ರಿಕ್ತನಾಗುತ್ತಾನೆ.

ಈ ಬಗ್ಗೆ ಸ್ಥಳೀಯರು ವಿಶು ಶೆಟ್ಟಿಯವರಿಗೆ ಮಾಹಿತಿ ನೀಡಿದ್ದು, ಶಾಲಾರಂಭದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗಬಹುದು ಎಂದು ಕೂಡಲೇ ವಿಶು ಶೆಟ್ಟಿ ಕಾರ್ಯಾಚರಣೆ ನಡೆಸಿ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ.

ವಿಶು ಶೆಟ್ಟಿ ಅವರ ಮನವಿಯ ಮೇರೆಗೆ ಆಶ್ರಮದ ಡಾ. ಉದಯಕುಮಾ‌ರ್ ದಂಪತಿ ಆಶ್ರಯ ಮತ್ತು ಚಿಕಿತ್ಸೆ ನೀಡಲು ಸಮ್ಮತಿಸಿದ್ದು, ತಮ್ಮ ವಾಹನದಲ್ಲಿ ಮಂಜೇಶ್ವರಕ್ಕೆ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ.

Ad
Ad
Nk Channel Final 21 09 2023
Ad