Ad

ಕಲ್ಕಿ ಅಬ್ಬರಕ್ಕೆ ಬಾಕ್ಸ್ ಆಫೀಸ್‌ ಧೂಳೀಪಟ : ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ

ಕಲ್ಕಿ 2898 ಎಡಿ’ ಬಿಡುಗಡೆ ಕಂಡಾಗಿಂದಲು ಭರ್ಜರಿ ಭೇಟೆ ಮಾಡುತ್ತಿದೆ. ರಿಲೀಸ್‌ ಆದ ನಾಲ್ಕೇ ದಿನಕ್ಕೆ 500 ಕೋಟಿ ರೂ ಕಂಡಿರುವುದು ಹೆಮ್ಮೆಯ ವಿಚಾರ.ನಾಗ್ ಅಶ್ವಿನ್ ಅವರ ಕಲ್ಕಿ 2898 AD ಜೂನ್ 27 ರಂದು ಬಿಡುಗಡೆಯಾಯಿತು.

ಬೆಂಗಳೂರು: ಕಲ್ಕಿ 2898 ಎಡಿ’ ಬಿಡುಗಡೆ ಕಂಡಾಗಿಂದಲು ಭರ್ಜರಿ ಭೇಟೆ ಮಾಡುತ್ತಿದೆ. ರಿಲೀಸ್‌ ಆದ ನಾಲ್ಕೇ ದಿನಕ್ಕೆ 500 ಕೋಟಿ ರೂ ಕಂಡಿರುವುದು ಹೆಮ್ಮೆಯ ವಿಚಾರ.ನಾಗ್ ಅಶ್ವಿನ್ ಅವರ ಕಲ್ಕಿ 2898 AD ಜೂನ್ 27 ರಂದು ಬಿಡುಗಡೆಯಾಯಿತು. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್‌ ಬಚ್ಚನ್ ಮತ್ತು ಕಮಲ್ ಹಾಸನ್ ಅಭಿನಯದ ಈ ಚಿತ್ರ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ 300.6 ಕೋಟಿ ರೂ. ಗಳಿಸಿದೆ.

Ad
300x250 2

ವರದಿಗಳ ಪ್ರಕಾರ, ಕಲ್ಕಿ 2898 AD ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಮೀರಿದೆ.ಭಾನುವಾರ ಈ ಸಿನಿಮಾ 83.2 ಕೋಟಿ ರೂಪಾಯಿ ಗಳಿಸಿದೆ.

ಕರ್ನಾಟಕದಲ್ಲಿ ‘ಕಲ್ಕಿ2898 AD’ ಸಿನಿಮಾ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಇಲ್ಲದೇ ಇರುವುದರಿಂದ ಕರ್ನಾಟಕದಲ್ಲಿ ಸುಮಾರು 444 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 219 ಸ್ಕ್ರೀನ್‌ಗಳಲ್ಲಿ ತೆಲುಗು, 100 ಸ್ಕ್ರೀನ್‌ಗಳಲ್ಲಿ ಕನ್ನಡ, 85 ಸ್ಕ್ರೀನ್‌ಗಳಲ್ಲಿ ಹಿಂದಿ, 40 ಸ್ಕ್ರೀನ್‌ಗಳಲ್ಲಿ ತಮಿಳು ಭಾಷೆಯ ಕಲ್ಕಿ ರಿಲೀಸ್ ಆಗಿದ್ದವು. ಈ ನಾಲ್ಕು ಭಾಷೆಗಳಿಂದ ಕರ್ನಾಟಕದಲ್ಲಿ ‘ಕಲ್ಕಿ2898 AD’ ಗಳಿಸಿದ್ದು ಬರೋಬ್ಬರಿ 6.7 ಕೋಟಿ ರೂಪಾಯಿ (Nett) ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಕೊಟ್ಟಿದ್ದಾರೆ.

Ad
Ad
Nk Channel Final 21 09 2023
Ad