Ad

ಜಲಪಾತದ ನೀರಿಗೆ ಹಾರಿ ಕೊಚ್ಚಿಕೊಂಡು ಹೋದ ಯುವಕ : ವಿಡಿಯೋ ವೈರಲ್

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕ ಈಜಾಡಲೆಂದು ಜಲಪಾತದ ನೀರಿಗೆ ಹಾರಿ ಕೊಚ್ಚಿಕೊಂಡು ಹೋಗಿದ್ದಾನೆ. ಈ ಘಟನೆಯು ಮಹಾರಾಷ್ಟ್ರದ ಪುಣೆಯ ತಮ್ಹಿನಿ ಘಾಟ್‌ನ ವಾಟರ್​​ಫಾಲ್ಸ್​ನಲ್ಲಿ ನಡೆದಿದೆ.

ಮುಂಬೈ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕ ಈಜಾಡಲೆಂದು ಜಲಪಾತದ ನೀರಿಗೆ ಹಾರಿ ಕೊಚ್ಚಿಕೊಂಡು ಹೋಗಿದ್ದಾನೆ. ಈ ಘಟನೆಯು ಮಹಾರಾಷ್ಟ್ರದ ಪುಣೆಯ ತಮ್ಹಿನಿ ಘಾಟ್‌ನ ವಾಟರ್​​ಫಾಲ್ಸ್​ನಲ್ಲಿ ನಡೆದಿದೆ.

Ad
300x250 2

ಪುಣೆಯ ಭೋಸಾರಿ ಪ್ರದೇಶದ ಪಿಂಪ್ರಿ ಚಿಂಚ್ವಾಡ್​ನ ನಿವಾಸಿ ಸ್ವಪ್ನಿಲ್​ ಧಾವ್ಡೆ ಸಾವನ್ನಪ್ಪಿದ ಯುವಕ. ತನ್ನ ಜೊತೆ ಜಿಮ್ ಮಾಡುವ 32 ಸ್ನೇಹಿತರೊಂದಿಗೆ ಯುವಕ ಪ್ರವಾಸಕ್ಕೆಂದು ಬಂದಿದ್ದನು. ಈ ವೇಳೆ ತಮ್ಹಿನಿ ಘಾಟ್‌ನ ಜಲಪಾತಕ್ಕೆ ಈಜಾಡಲೆಂದು ಜಂಪ್ ಮಾಡಿದ್ದಾನೆ. ಆದರೆ ನೀರಿನ ರಭಸಕ್ಕೆ ಜೋರಾಗಿದ್ದರಿಂದ ಈಜಲು ಸಾಧ್ಯವಾಗದೆ ಹಾಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಯುವಕ ಈಜಲೆಂದು ಜಲಪಾತದ ನೀರಿಗೆ ಜಂಪ್ ಮಾಡುತ್ತಿರುವ ದೃಶ್ಯ ಮೊಬೈಲ್​​ನಲ್ಲಿ ಸೆರೆ ಹಿಡಿಯಲಾಗಿದೆ. ಯುವಕನು ನೀರಿಗೆ ಜಿಗಿದು ಈಜಿ ದಡ ಸೇರಲು ಮುಂದಾಗುತ್ತಾನೆ. ಆದರೆ ನೀರಿನ ಹರಿಯುವ ರಭಸ ಜೋರಾಗಿದ್ದರಿಂದ ಕೊಚ್ಚಿಕೊಂಡು ಹೋಗಿದ್ದಾನೆ. ಯುವಕನ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದ್ದು ಇದುವರೆಗೂ ಪತ್ತೆಯಾಗಿಲ್ಲ ಎಂದು ರಕ್ಷಣ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

https://x.com/punekarnews/status/1807676777290236166?

 

 

Ad
Ad
Nk Channel Final 21 09 2023
Ad